ಸುದ್ದಿ ಕಣಜ.ಕಾಂ | DISTRICT | TOURISM
ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತ ಮತ್ತೆ ಮೈದುಂಬಿ ಹರಿಯುತ್ತಿದೆ. ಅದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗಳು ದುಂಬಾಲು ಇಟ್ಟಿದ್ದಾರೆ.
ಮಳೆಗೂ ಮುನ್ನ ಜಲಪಾತದಲ್ಲಿ ನೀರಿಲ್ಲದೇ ರಾಜಾ, ರೋರರ್ ಕಣ್ಮರೆಯಾಗಿ ರಾಕೆಟ್ ತನ್ನ ಗತಿಯನ್ನು ಕಳೆದುಕೊಂಡಿತ್ತು. ರಾಣಿ ವೈಯ್ಯಾರದಿಂದ ಜಲಪಾತದ ಗುಂಡಿಗೆ ಬೀಳುತ್ತಿದ್ದಳು. ಆದರೆ, ಜೋಗ ಪರಿಸರದಲ್ಲಿ ಮಳೆಯಾಗುತ್ತಿರುವುದರಿಂದ ಮತ್ತೆ ಜಲಾಪಾತಗಳಿಗೆ ಮರಜೀವ ಬಂದಿದೆ.
READ |ಅಕಾಲಿಕ ಮಳೆಯಿಂದ ಮೆಸ್ಕಾಂಗೆ ಉಂಟಾದ ನಷ್ಟವೆಷ್ಟು?
ಮೂರು ದಿನಗಳಲ್ಲಿ ಆರು ಸಾವಿರ ಜನ ಭೇಟಿ
ಭೋರ್ಗರೆಯುವ ಸದ್ದು ಮಾಡುತ್ತ ಗುಂಡಿಗೆ ಜಿಗಿಯುತ್ತಿರುವ ರಾಜಾ, ರೋರರ್, ರಾಕೆಟ್ ಮತ್ತು ರಾಣಿ ಪ್ರವಾಸಿಗಳನ್ನು ತನ್ನತ್ತ ಸೆಳೆಯುತ್ತಿವೆ. ಕಳೆದ ಮೂರು ದಿನಗಳಲ್ಲಿ ಆರು ಸಾವಿರಕ್ಕೂ ಅಧಿಕ ಜನ ಜೋಗಕ್ಕೆ ಭೇಟಿ ನೀಡಿದ್ದಾರೆ. ಭಾನುವಾರ ಮೋಡ ಕವಿದ ವಾತಾವರದ ನಡುವೆಯೂ ಪ್ರವಾಸಿಗಳ ದಂಡು ಇಲ್ಲಿಗೆ ಆಗಮಿಸಿತ್ತು. ದಟ್ಟ ಮಂಜಿನ ನಡುವೆ ಗೆರೆಯಂತೆ ಕಾಣುತಿದ್ದ ಜೋಗದ ಸೌಂದರ್ಯವನ್ನು ಪ್ರವಾಸಿಗರು ಆಸ್ವಾದಿಸಿದರು. ಜತೆಗೆ ಜಿಟಿ ಮಳೆ ದೃಶ್ಯಕಾವ್ಯವನ್ನೇ ಸೃಷ್ಟಿಸಿತ್ತು.
https://suddikanaja.com/2021/08/01/special-package-for-tourist-to-shivamogga/