ತೀರ್ಥಹಳ್ಳಿ ಸರ್ಕಾರಿ ಪಿಯು ಕಾಲೇಜು 4 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್

Araga jnanendra

 

 

ಸುದ್ದಿ ಕಣಜ.ಕಾಂ | TALUK | RECRUITMENT 
ತೀರ್ಥಹಳ್ಳಿ: ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ, ತೀರ್ಥಹಳ್ಳಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ
ತಕ್ಷಣ ಉಪನ್ಯಾಸಕ ಹುದ್ದೆ ಮಂಜೂರು ಮಾಡಲು ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ರಾಮಚಂದ್ರ ಅವರು ಒಪ್ಪಿಗೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.

READ | ಶಿವಮೊಗ್ಗದಲ್ಲಿ ರೌಡಿ ಕಾಲಿಗೆ ಗುಂಡೇಟು

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಂ.ಸುಧಾ ವಾಣಿಜ್ಯ ವಿಭಾಗ ಎದುರಿಸುತ್ತಿರುವ ಉಪನ್ಯಾಸಕ ಹುದ್ದೆಗಳ ಕೊರತೆಯ ಬಗ್ಗೆ ತಿಳಿಸಿ, ತಕ್ಷಣ ನೇಮಕಾತಿ ಮಾಡಿಸಿಕೊಡಬೇಕು ಎಂದು ವಿನಂತಿಸಿದರು.
ಸ್ಪಂದನೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
ತಕ್ಷಣ ಮನವಿಗೆ ಸ್ಪಂದಿಸಿದ ಸಚಿವರು, ಪದವಿ ಪೂರ್ವ ಶಿಕ್ಷಣ ನಿರ್ದೇಶಕರನ್ನು ಸಂಪರ್ಕಿಸಿ ಹುದ್ದೆ ಕೊರತೆ ಬಗ್ಗೆ ವಿವರಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೇಮಕ ಮಾಡಬೇಕು ಎಂದು ವಿವರಿಸಿದರು.
ಸಚಿವರ ಕೋರಿಕೆಗೆ ಸ್ಪಂದಿಸಿದ ನಿರ್ದೇಶಕರು, ಪ್ರಸ್ತಾವನೆ ಕಳಿಸಿದರೆ ತಕ್ಷಣ ನಾಲ್ಕು ಉಪನ್ಯಾಸಕರ ಹುದ್ದೆಯನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

https://suddikanaja.com/2021/01/25/dial-112-launched-by-shivamogga-police-department/

Leave a Reply

Your email address will not be published. Required fields are marked *

error: Content is protected !!