ಯೋಗದಲ್ಲಿ ಕರ್ನಾಟಕಕ್ಕೆ ಮೊದಲ ಬಾರಿ ಬೆಳ್ಳಿಯ ಗೌರವ ತಂದುಕೊಟ್ಟ ಮಲೆನಾಡಿನ ಪ್ರತಿಭೆ

Yoga kavya

 

 

ಸುದ್ದಿ ಕಣಜ.ಕಾಂ | KARNATAKA | TALENT JUNCTION
ಶಿವಮೊಗ್ಗ: ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಬೆಳ್ಳಿಯ ಪದಕ ಪಡೆದಿದ್ದಾರೆ.
ಅಪ್ಪಟ ಗ್ರಾಮೀಣ ಪ್ರತಿಭೆ ಕೆ.ಎನ್.ಕಾವ್ಯ ಅವರು ಬೆಳ್ಳಿ ಪದಕ ಪಡೆದು ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಜೂನ್ 19ರಂದು ದೆಹಲಿಯ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನಲ್ಲಿ ನಡೆದ 16 ವರ್ಷದೊಳಗಿನ ರಾಷ್ಟ್ರಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಮೊದಲ ಬಾರಿಗೆ ರಾಜ್ಯಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.

READ | ಶಿವಮೊಗ್ಗದ ಮೂರು ಪಾರಂಪರಿತ ತಾಣಗಳಲ್ಲಿ ಯೋಗ ದಿನ, ಎಲ್ಲಿ, ಹೇಗಿತ್ತು ಆಚರಣೆ?

ಕರ್ನಾಟಕ ಪ್ರೌಢ ಶಾಲೆಯಲ್ಲಿ ಶಿಕ್ಷಣ
ಗರ್ತಿಕೆರೆ ಸಮೀಪದ ಎಣ್ಣೆನೋಡ್ಲು ಗ್ರಾಮದ ನಾಗರಾಜ್ ಮತ್ತು ಯಶೋಧಮ್ಮ ದಂಪತಿಗಳ ಪುತ್ರಿಯಾದ ಕಾವ್ಯ ಅವರು ಪ್ರಾಥಮಿಕ ಶಿಕ್ಷಣವನ್ನು ಹೊಸನಗರ ತಾಲೂಕಿನ ಅಮೃತ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಓದಿದ್ದಾರೆ.
ಕಾವ್ಯ ಹುಂಚದಕಟ್ಟೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಉಪಾಧ್ಯಾಯರುಗಳು, ಸಿಬ್ಬಂದಿ ಹಾಗೂ ಸಹಪಾಠಿಗಳು ಅಭಿನಂದಿಸಿದ್ದಾರೆ.

https://suddikanaja.com/2022/01/13/cambodia-landmine-rat-magawa-dies/

Leave a Reply

Your email address will not be published. Required fields are marked *

error: Content is protected !!