
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣೇಶ ಮೆರವಣಿಗೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜಬೀದಿ ಉತ್ಸವ ಸಾಗುವ ದಾರಿಯುದ್ದಕ್ಕೂ ಅಲಂಕಾರ ಮಾಡಲಾಗಿದೆ.
ಗೋಪಿ ವೃತ್ತದಲ್ಲಿ ಆಂಜನೇಯ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅಮೀರ್ ಅಹಮದ್ ವೃತ್ತ ಕೇಸರಿಕರಣಗೊಂಡಿದ್ದು, ಚಂದ್ರಯಾನ 3 ಮಾದರಿ ಸಿದ್ಧಪಡಿಸಲಾಗಿದೆ. ಶಿವಪ್ಪ ನಾಯಕ ವೃತ್ತದಲ್ಲಿ ಪುಷ್ಪಾಲಂಕಾರ, ಗಾಂಧಿಬಜಾರ್ ದ್ವಾರ ಅಲಂಕಾರಗೊಂಡಿದೆ. ಉಗ್ರ ನರಸಿಂಹ ಪ್ರತಿಮೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಜನರು ಸೆಲ್ಫಿಗಾಗಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದಾರೆ. ಬುಧವಾರ ಮಧ್ಯರಾತ್ರಿಯವರೆಗೆ ಜನರು ಸೇರಿದ್ದು ವಿಶೇಷವಾಗಿತ್ತು.
READ | 30 ಅಡಿ ಎತ್ತರದ ‘ಉಗ್ರ ನರಸಿಂಹ’ ವೀಕ್ಷಿಸಲು ಜನವೋ ಜನ, ಶಿವಮೊಗ್ಗ ನಗರ ಕೇಸರಿಮಯ, ಈ ಸಲದ ಘೋಷಣೆ ಏನು?




