ಶಿವಮೊಗ್ಗದಲ್ಲಿ ಶಾಲೆಗಳ ರಜೆಯ ಬಗ್ಗೆ ಶಿಕ್ಷಣ‌ ಇಲಾಖೆ‌ ಮಹತ್ವದ ಸೂಚನೆ

Public Notice

 

 

ಸುದ್ದಿ‌ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಧಾರಾಕಾರ ಮಳೆ ಹಿನ್ನೆಲೆ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ‌ಆದರೆ, ಶಿವಮೊಗ್ಗ, ಭದ್ರಾವತಿ, ಸೊರಬ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಶಾಲೆಗಳಲ್ಲಿ ತರಗತಿಗಳು ಯಥಾಸ್ಥಿತಿ ನಡೆಯಲಿವೆ ಎಂದು ಡಿಡಿಪಿಐ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

READ | ಮೂರು ತಾಲೂಕುಗಳಲ್ಲಿ‌ ಶಾಲೆಗಳಿಗೆ ರಜೆ, ಯಾವ ತಾಲೂಕಿಗೆ ಅನ್ವಯ?

ಸುಳ್ಳು‌ ಸಂದೇಶ ರವಾನಿಸುವವರ ವಿರುದ್ಧ ಕ್ರಮ
ಕೆಲವರು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶಿವಮೊಗ್ಗ, ಭದ್ರಾವತಿ, ಸೊರಬ ಮತ್ತು ಶಿಕಾರಿಪುರ ತಾಲೂಕಿನ ಶಾಲೆಗಳಿಗೂ ರಜೆ ನೀಡಲಾಗಿದೆ ಎಂಬ ಸಂದೇಶವನ್ನು‌ ಕಳುಹಿಸಲಾಗುತ್ತಿದೆ. ಇದನ್ನು ಯಾರೂ ನಂಬಬೇಡಿ. ನಿತ್ಯದಂತೆ ಶಾಲೆಗಳು ನಡೆಯಲಿವೆ. ಇಂತಹ ತಪ್ಪು ಸಂದೇಶವನ್ನು ವಾಟ್ಸಪ್ ನಲ್ಲಿ ಯಾರೋ ಹರಿಬಿತ್ತಿರುವುದನ್ನು ಗಂಭೀರವಾಗಿ ಪರಿಗಣಿದೆ. ಅಂತಹವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!