ಶಿವಮೊಗ್ಗ ಮಳೆಗೆ ಎರಡನೇ ಬಲಿ, ಆಶ್ರಯ ಪಡೆದ ಮನೆಯೇ ಮೈಮೇಲೆ ಬಿದ್ದು ಸಾವು

Rain

 

 

ಸುದ್ದಿ‌ ಕಣಜ.ಕಾಂ | DISTRICT | RAIN DAMAGE
ಶಿವಮೊಗ್ಗ: ಜಿಲ್ಲೆಯಲ್ಲಿ‌ ಸುರಿಯುತ್ತಿರುವ ಮಳೆಗೆ ಎರಡನೇ‌ ಬಲಿಯಾಗಿದೆ. ಮನೆ ಗೋಡೆ ಕುಸಿತದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಬ್ಬ ಮೃತಪಟ್ಟರೆ, ಮತ್ತೊಬ್ಬ ಜೀವಹಾನಿಯಿಂದ ಪಾರಾಗಿದ್ದಾನೆ.
ಸೊರಬ ತಾಲೂಕಿನ‌ ಚಿಟ್ಟೂರು ಗ್ರಾಮದಲ್ಲಿ ಮಳೆಯಿಂದ‌ ರಕ್ಷಣೆ ಪಡೆಯಲು‌ ನಿಂತಿದ್ದ ಮನೆಯೇ ಕೂಲಿ ಕಾರ್ಮಿಕ ಅಶೋಕ್ (23) ಎಂಬಾತ ಮೇಲೆ‌ ಕುಸಿದಿದ್ದು, ಆತ ಮೃತಪಟ್ಟಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡಾದಲ್ಲಿ ಬುಧವಾರ ಗೀತಾಬಾಯಿ ಎಂಬುವವರ ಮನೆ ಕುಸಿದಿದೆ. ಈ ವೇಳೆ‌ ಮನೆಯಲ್ಲಿ ಅನಾರೋಗ್ಯದಿಂದ‌ ಮಲಗಿದ್ದ ಮಗ ಚಂದನ್ ಕುಮಾರ್(11) ಬಚಾವ್ ಆಗಿದ್ದಾನೆ.

READ | ಮಳೆ‌ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ‌ ಕೆ.ಸಿ.ನಾರಾಯಣಗೌಡ ಭೇಟಿ, ನೀಡಿದ ಭರವಸೆಗಳೇನು?

ಹಲವೆಡೆ ಕಾಗೋಡು ತಿಮ್ಮಪ್ಪ ಭೇಟಿ
ಭಾರಿ‌‌ ಮಳೆಗೆ ತ್ಯಾಗರ್ತಿ, ಹೊಸಂತೆ ಗ್ರಾಮದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಮಾಜಿ‌ ಸಚಿವ‌ ಕಾಗೋಡು ತಿಮ್ಮಪ್ಪ ಅವರು ಗುರುವಾರ ಭೇಟಿ‌ ನೀಡಿದರು. 

Leave a Reply

Your email address will not be published. Required fields are marked *

error: Content is protected !!