ಸುದ್ದಿ ಕಣಜ.ಕಾಂ | DISTRICT | RAILWAY NEWS
ಶಿವಮೊಗ್ಗ: ರೈಲ್ವೆ ಇಲಾಖೆಯು ಶಿವಮೊಗ್ಗಕ್ಕೆ ಮತ್ತೊಂದು ರೈಲಿನ ಕೊಡುಗೆ ನೀಡಿದೆ. ತಾಳಗುಪ್ಪ- ಮೈಸೂರು- ತಾಳಗುಪ್ಪ ನಡುವೆ ಒಂದು ಜತೆ ರೈಲುಗಳು ಜು.24ರಿಂದ ಸಂಚಾರ ಆರಂಭಿಸಲಿವೆ.
ಮೈಸೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ರೈಲು ಶಿವಮೊಗ್ಗಕ್ಕೆ ರಾತ್ರಿ 8.30 ಗಂಟೆಗೆ, ತಾಳಗುಪ್ಪಕ್ಕೆ ರಾತ್ರಿ 11.30ಕ್ಕೆ ತಲುಪಲಿದೆ. ತಾಳಗುಪ್ಪದಿಂದ ಬೆಳಗ್ಗೆ 6.10ಕ್ಕೆ ಹೊರಟು, ಶಿವಮೊಗ್ಗಕ್ಕೆ ಬೆಳಗ್ಗೆ 8.15, ಮೈಸೂರಿಗೆ ಮಧ್ಯಾಹ್ನ 3.35ಕ್ಕೆ ತಲುಪಲಿದೆ. ಈ ರೈಲುಗಳಲ್ಲಿ 10 ದ್ವಿತೀಯ ದರ್ಜೆ 10 ಬೋಗಿಗಳು, ಸರಕು ಸಾಗಣೆ ಮತ್ತು ಬ್ರೆಕ್ ಬೋಗಿಗಳು ಇರಲಿವೆ.
READ | ಹಂದಿ ಅಣ್ಣಿ ಕೊಲೆ ಆರೋಪಿಗಳು ಶಿವಮೊಗ್ಗ ಪೊಲೀಸರ ವಶಕ್ಕೆ, ಇಂದೇನೇನು ಪ್ರಕ್ರಿಯೆ ನಡೆಯಲಿವೆ?
ತಾಳಗುಪ್ಪದಿಂದ ಹೊರಡುವ ರೈಲು
ಈ ಹಿಂದೆ ತಾಳಗುಪ್ಪ ಚಾಮರಾಜನಗರದ ನಡುವೆ ಸಂಚರಿಸುತ್ತಿದ್ದ ರೈಲನ್ನು ಕೋವಿಡ್ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು. ಈಗ ಸಮಯ ಸ್ವಲ್ಪ ಬದಲಾವಣೆ ಮಾಡಿ ಪುನಾರಂಭಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
https://suddikanaja.com/2021/11/10/rpf-police-rescued-woman-from-moving-train-at-shivamogga-railway-station/