KSEಗೆ ತಟ್ಟಲಿದೆ BSY ಶಾಪ

Beluru Gopalakrishna

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶಾಪ ಶಾಸಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ತಟ್ಟಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅಳುತ್ತ ರಾಜೀನಾಮೆ ನೀಡಲು ಕಾರಣ ಬಿಜೆಪಿಯ ಪ್ರಮುಖರಾದ ಕೆ.ಎಸ್.ಈಶ್ವರಪ್ಪ, ಬಿ.ಎಲ್.ಸಂತೋಷ್, ಸಿ.ಟಿ ರವಿ. ಪ್ರಹ್ಲಾದ್ ಜೋಶಿ ಅವರೇ ಕಾರಣ. ಬಿ.ಎಸ್.ವೈ ಕುಟುಂಬವನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಪಕ್ಷದಿಂದ ಸಾಕಷ್ಟು ತೊಂದರೆಯನ್ನು ಅನುಭವಿಸಿರುವ ಯಡಿಯೂರಪ್ಪ ಅವರ ಶಾಪ ಮುಂಬರುವ ಚುನಾವಣೆಯಲ್ಲಿ ಈಶ್ವರಪ್ಪ ಅವರಿಗೆ ತಟ್ಟಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

READ | ಶಿವಮೊಗ್ಗದಿಂದಲೇ ಮೂರು ಜಿಲ್ಲೆಗಳಿಗೆ ಸಾರವರ್ಧಿತ ಅಕ್ಕಿ ಪೂರೈಕೆ, ಆರೋಗ್ಯಕ್ಕೇನು ಪ್ರಯೋಜನ?

ಕ್ಷೀನ್ ಚಿಟ್ ಹಾಸ್ಯಾಸ್ಪದ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಈಶ್ವರಪ್ಪ ಅವರನ್ನು ಕ್ಲೀನ್ ಚಿಟ್ ನೀಡಿರುವುದೇ ಹಾಸ್ಯಾಸ್ಪದ ಬೆಳವಣಿಗೆಯಾಗಿದೆ. ಸರ್ಕಾರದ ಅಧೀನದಲ್ಲಿರುವ ಪೊಲೀಸ್ ಇಲಾಖೆ ಈಶ್ವರಪ್ಪ ಪರವಾಗಿ ಕೆಲಸ ಮಾಡಿದೆ. ಹೀಗಾಗಿ, ಕ್ಲೀನ್ ಚಿಟ್ ಸಿಕ್ಕಿದೆ. ಸಂತೋಷ್ ಪಾಟೀಲ್ ಅವರ ನೊಂದ ಕುಟುಂಬದವರ ಕಣ್ಣೀರು ಈಶ್ವರಪ್ಪ ಅವರಿಗೆ ತಪ್ಪಿದ್ದಿಲ್ಲ. ಪಾಟೀಲ್ ಕುಟುಂಬ ಹೈಕೋರ್ಟ್ ಮೆಟ್ಟಿಲೇರಲಿದೆ ಎಂದರು‌
ಪಕ್ಷದ‌ ಪ್ರಮುಖರಾದ ರಮೇಶ್ ಶಂಕರಘಟ್ಟ, ವೈ.ಎಚ್. ನಾಗರಾಜ್, ಪಿ.ಓ.ಶಿವಕುಮಾರ್, ಸೋಮಶೇಖರ್, ವಿಜಯಲಕ್ಷ್ಮೀ ಪಾಟೀಲ್ ಉಪಸ್ಥಿತರಿದ್ದರು.

https://suddikanaja.com/2022/04/13/rdpr-minister-ks-eshwarappa-spoke-on-santhosh-patil-suicide-case-at-shimoga/

Leave a Reply

Your email address will not be published. Required fields are marked *

error: Content is protected !!