ಸುದ್ದಿ ಕಣಜ.ಕಾಂ | CITY | DRINKING WATER
ಶಿವಮೊಗ್ಗ: ಸೆಪ್ಟೆಂಬರ್ 20 ರಂದು ಕೃಷ್ಣರಾಜೇಂದ್ರ ಜಲ ಶುದ್ದೀಕರಣ ಕೇಂದ್ರಕ್ಕೆ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಸೆ.20 ಮತ್ತು 21 ರಂದು ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಮಂಡ್ಲಿಯಲ್ಲಿರುವ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ದುರಸ್ತಿ ಮತ್ತು ನಿರ್ವಹಣೆ ಸಂಬಂಧ ವಿದ್ಯುತ್ ವ್ಯತ್ಯಯವಾಗಲಿದೆ. ಹೀಗಾಗಿ, ಎರಡು ದಿನ ಕುಡಿಯು ನೀರಿನ ಪೂರೈಕೆಯಲ್ಲೂ ತೊಂದರೆ ಆಗಲಿದೆ. ಸಾರ್ವಜನಿಕರು ಮಂಡಳಿ ಮತ್ತು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆ ತಿಳಿಸಿದೆ.