ಜಿಂಕೆ ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಗಳು, ಗ್ರಾಮಸ್ಥರಿಂದ ನಡೀತು ರಕ್ಷಣೆ ಕಾರ್ಯ

Deer shikaripura

 

 

ಸುದ್ದಿ ಕಣಜ.ಕಾಂ | DISTRICT | WILD LIFE
ಶಿಕಾರಿಪುರ: ತಾಲೂಕಿನ ಗ್ರಾಮವೊಂದರಲ್ಲಿ ಜಿಂಕೆ (Spotted Deer)ಯೊಂದನ್ನು ಗ್ರಾಮಸ್ಥರು ನಾಯಿಗಳಿಂದ ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಜಿಂಕೆಗೆ ಚಿಕಿತ್ಸೆ ನೀಡಿ ಅರಣ್ಯ(Forest)ಕ್ಕೆ ಬಿಡಲಾಗಿದೆ.
ಅರಣ್ಯದಿಂದ ಗ್ರಾಮದ ಕಡೆಗೆ ಜಿಂಕೆಯು ಬಂದಿದ್ದು, ಬೀದಿನಾಯಿ(Street dogs)ಗಳು ಅದನ್ನು ಅಟ್ಟಾಡಿಸಿಕೊಂಡು ಬಂದಿವೆ. ತಕ್ಷಣ ಗಾಬರಿಗೊಂಡ ಜಿಂಕೆಯು ಓಡಲಾರಂಭಿಸಿದೆ. ಆದರೂ ಬೆಂಬಿಡದೇ ನಾಯಿಗಳು ಓಡಿಸಿಕೊಂಡು ಹೋಗಿವೆ.

ಜಿಂಕೆಯ ರಕ್ಷಣಾ ಕಾರ್ಯದ ವಿಡಿಯೋ ವೀಕ್ಷಿಸಿ (VIDEO REPORT)

READ | ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅರೆಸ್ಟ್, ವಿಚಾರಣೆ ಬಳಿಕ ಪ್ರಕರಣಕ್ಕೆ‌ ಟ್ವಿಸ್ಟ್ 

ನಾಯಿಗಳನ್ನು ಓಡಿಸಿ ಜಿಂಕೆಯನ್ನು ಕಾಪಾಡಲಾಗಿದೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಚಿಕಿತ್ಸೆ ನೀಡಿದ ನಂತರ ಜಿಂಕೆಯನ್ನು ಗಂಗವ್ವನ ಸರ ಅರಣ್ಯಕ್ಕೆ ಬಿಡಲಾಗಿದೆ.

Leave a Reply

Your email address will not be published. Required fields are marked *

error: Content is protected !!