ಸಾಗರದಿಂದ ಸೊರಬಕ್ಕೆ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿ ಅರೆಸ್ಟ್, ಕಾರಿನ ಡಿಕ್ಕಿಯಲ್ಲಿತ್ತು ಭಾರಿ ಪ್ರಮಾಣದ ಗಾಂಜಾ

Ganja arrest

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಸೊರಬ: ಸಾಗರ(sagar)ದಿಂದ ಸೊರಬ(sorab)ದ ಕಡೆಗೆ ಕಾರಿನಲ್ಲಿ ಗಾಂಜಾ ಸಾಗಿಸುತಿದ್ದ ಒಬ್ಬ ಆರೋಪಿ (accused)ಯನ್ನು ಬಂಧಿಸಿ, ಆತನ ಬಳಿಯಿಂದ ₹35,000 ಮೌಲ್ಯದ ಗಾಂಜಾ (Marijuana) ವಶಕ್ಕೆ‌ ಪಡೆಯಲಾಗಿದೆ.
ಸಾಗರ ಟೌನ್ ನ ನೆಹರೂ ನಗರ ನಿವಾಸಿ ಕಾರು ಚಾಲಕ ಅಜೀಜ್ ಉರ್ ರೆಹಮಾನ್(32) ಬಂಧಿತ‌ ಆರೋಪಿ. ಈತನ ಬಳಿಯಿಂದ ಅಂದಾಜು ₹35,000 ಮೌಲ್ಯದ ಒಟ್ಟು 1 ಕೆಜಿ 170 ಗ್ರಾಂ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಸೊರಬ ಪೊಲೀಸ್‌ ಠಾಣೆಯಲ್ಲಿ NDPS ಕಾಯ್ದೆ (act) ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕಾರಿನ ಡಿಕ್ಕಿಯಲ್ಲಿತ್ತು ಗಾಂಜಾ
ಖಚಿತ ಮಾಹಿತಿ ಮೇರೆಗೆ ಸೊರಬ ಪೊಲೀಸ್ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಯ ತಂಡವು ಹಾಲಗಳಲೆ ಬಸ್ ನಿಲ್ದಾಣದ ಹತ್ತಿರ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅಲ್ಲಿಗೆ ಬಂದ ಸಿಲ್ವರ್ ಬಣ್ಣದ ಹೊಂಡ ಸಿಟಿ ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಒಣಗಿದ ಗಾಂಜಾ ಇರುವುದು ಕಂಡು ಬಂದಿದೆ.

VIDEO NEWS | ಜಿಂಕೆ ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಗಳು, ಗ್ರಾಮಸ್ಥರಿಂದ ನಡೀತು ರಕ್ಷಣೆ ಕಾರ್ಯ

ಖಾಲಿ ಜಾಗದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ!
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ‌ ಸಾರ್ವಜನಿಕರಿಗೆ ಗಾಂಜಾ‌ ಮಾರಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಸಾಗರ ಟೌನ್ ಜನ್ನತ್ ನಗರದ ಕಿಶೋರ್ ಸಿಂಗ್ (27), ನೆಹರೂ ನಗರದ ಸುನೀಲ್(27) ಬಂಧಿತ ಆರೋಪಿಗಳು. ಅಂದಾಜು ₹30,000 ಒಟ್ಟು 1 ಕೆಜಿ 135 ಗ್ರಾಂ ಒಣ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀಧರ ನಗರದ ಕಡೆ ಹೋಗುವ ಸೊರಬ ಮುಖ್ಯ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಗಾಂಜಾವನ್ನು ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಾಗರ ಟೌನ್ ಪಿಐ ಮತ್ತು ಪಿಎಸ್ಐ ಹಾಗೂ ಕಾರ್ಗಲ್ ಪಿಎಸ್ಐ ಮತ್ತು ಸಿಬ್ಬಂದಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

https://suddikanaja.com/2022/06/29/bike-theft-gang-arrested/

Leave a Reply

Your email address will not be published. Required fields are marked *

error: Content is protected !!