ಸಿದ್ದರಾಮೋತ್ಸವಕ್ಕೆ ತೆರಳುತಿದ್ದ ಬಸ್ ಭೀಕರ ಅಪಘಾತ, ಕಾರಿನಲ್ಲಿದ್ದ ಒಬ್ಬರ ಸಾವು, ಉಳಿದವರ ಸ್ಥಿತಿ ಗಂಭೀರ

Vehicle accident

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಸಾಗರ: ಸಿದ್ದರಾಮೋತ್ಸವಕ್ಕೆ ತೆರಳುತಿದ್ದ ಬಸ್ ಮತ್ತು ಕಾರಿನ ನಡುವೆ ಸೋಮವಾರ ಸಂಜೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ದುರಂತದಲ್ಲಿ ಕಾರಿನಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರು ಜನ ಗಂಭೀರ ಗಾಯಗೊಂಡಿದ್ದಾರೆ.
ತಾಲೂಕಿನ ತಾಳಗುಪ್ಪ ಸಮೀಪದ ಆಲಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಚನ್ನಗಿರಿಯ ಶಾಭಾಜ್(23) ಎಂಬುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ರಿಹಾನ್(14), ತಬಸ್ಸುಮ್(23), ಶಿಫಾ(27), ಖಮರುನ್ನಿಸಾ(45), ಜಬ್ರುನ್(55), ಮಹಮ್ಮದ್ ಉಸ್ಮಾನ್(25) ಗಾಯಗೊಂಡಿದ್ದಾರೆ. ಇವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

READ | ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಮುನ್ಸೂಚನೆ, ಎಷ್ಟು ದಿನ ಇರಲಿದೆ ಮಳೆ?

ಜೋಗ ವೀಕ್ಷಿಸಿ ದಾವಣಗೆರೆಗೆ ತೆರಳಲಿದ್ದ ಕಾಂಗ್ರೆಸ್ ಕಾರ್ಯಕರ್ತರು
ಜೋಗದತ್ತ ತೆರಳುತಿದ್ದ ದಾವಣಗೆರೆ ಮೂಲದ ಖಾಸಗಿ ಬಸ್ ಹಾಗೂ ಮಾರುತಿ ಇಕೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸಿದ್ದರಾಮೋತ್ಸವಕ್ಕೆ ತೆರಳಬೇಕಿದ್ದ ಬಸ್ಸಿನಲ್ಲಿ ಸುಮಾರು 25ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರಿದ್ದರು. ಜೋಗ ವೀಕ್ಷಿಸಿದ ನಂತರ ದಾವಣಗೆರೆ ತೆರಳಬೇಕಿದ್ದ ಅಪಘಾತಕ್ಕೆ ಒಳಗಾಗಿದೆ.
ಕಾರು ಸಂಪೂರ್ಣ ಜಖಂಗೊಂಡಿದೆ. ಬಸ್ಸಿನ ಒಂದು ಬದಿ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

https://suddikanaja.com/2021/09/19/irfan-murder-case-4-accused-arrested/

Leave a Reply

Your email address will not be published. Required fields are marked *

error: Content is protected !!