Lok adalat | ಪೇಂಟಿಂಗ್ ಕೆಲಸ‌ಮಾಡುತ್ತಿದ್ದ ರೇಣು ಕುಟುಂಬಕ್ಕೆ ಆಸರೆಯಾದ ಲೋಕ ಅದಾಲತ್

Shivamogga Court

 

 

ಸುದ್ದಿ ಕಣಜ.ಕಾಂ | DISTRICT | LOK ADALAT
ಶಿವಮೊಗ್ಗ: ಲೋಕ ಅದಾಲತ್ ಮೂಲಕ ನೊಂದ ಕುಟುಂಬಗಳಿಗೆ ಆಸರೆ ಸಿಕ್ಕಿದೆ. ಸಂತ್ರಸ್ತ ಕುಟುಂಬಕ್ಕೆ ₹19 ಲಕ್ಷ ಚೆಕ್ ವಿತರಣೆ ಮಾಡಲಾಗಿದೆ.
ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಸಂತ್ರಸ್ತರ ಎಸ್.ರೇಣು ಎಂಬುವರ ಕುಟುಂಬಕ್ಕೆ ₹19 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎಸ್.ರೇಣು ಅವರು ಮೋಟಾರು ಬೈಕ್’ನಲ್ಲಿ ಹೊಳೆಹೊನ್ನೂರು ಕಡೆಗೆ ಹೋಗುವಾಗ ಶಿವಮೊಗ್ಗ ತಾಲ್ಲೂಕಿನ ಹೊಳೆ ಬೇವನಹಳ್ಳಿ ಗ್ರಾಮದ ಬಳಿ 28 ಜನವರಿ 2022 ರಂದು ಬೈಕ್ ಅಪಘಾತಾದಲ್ಲಿ ಸಾವನ್ನಪ್ಪಿದ್ದರು.

IMG 20220813 WA0020
ಬೈಕ್ ಅಪಘಾತದಲ್ಲಿ ಮೃತಪಟ್ಟ ರೇಣು ಕುಟುಂಬಕ್ಕೆ ಚೆಕ್ ವಿತರಣೆ ಮಾಡಲಾಯಿತು.

ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟ ರೇಣು ಕುಟುಂಬಕ್ಕೆ ನ್ಯೂ ಇಂಡಿಯಾ ಅಸ್ಯೂರೆನ್ಸ್ ಕೊ. ಲಿಮಿಟೆಡ್ ಇನ್ಸೂರೆನ್ಸ್ ಕಂಪನಿ ಮೂಲಕ ನ್ಯಾಯಾಧೀಶರು ₹19 ಲಕ್ಷದ ಚೆಕ್ ಅನ್ನು ರೇಣು ಅವರ ಪತ್ನಿಯಾದ ಕೋಕಿಲಾ ಅವರಿಗೆ ವಿತರಣೆ ಮಾಡಲಾಯಿತು.
ಸಂತ್ರಸ್ತರಿಗೆ ನೆರವು ನೀಡಲು ಸಾಧ್ಯ
ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದ ಮೂಲಕ ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಸಾಧ್ಯವಾಗುತ್ತಿದೆ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ತಿಳಿಸಿದರು.
ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆಯೋಜಿಸಿದ್ದ 3ನೇ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
5 ಸಾವಿರ ಪ್ರಕರಣಗಳಿಗೆ ತೀರ್ಪು ಪ್ರಕಟ
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 52 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ವಕೀಲರು ಮತ್ತು ಕಕ್ಷಿದಾರರ ಸಹಕಾರದಿಂದ 10 ಸಾವಿರ ಪ್ರಕರಣಗಳನ್ನು ವಿಚಾರಣೆ ನಡೆಸಲಾಗಿದೆ ಹಾಗೂ ಸುಮಾರು 5 ಸಾವಿರ ಪ್ರಕರಣಗಳಿಗೆ ತೀರ್ಪು ಪ್ರಕಟಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯವಾದಿ ರಾಜಣ್ಣ ಸಂಕಣ್ಣನವರ್ ಉಪಸ್ಥಿತರಿದ್ದರು.

https://suddikanaja.com/2022/06/25/12576-cases-disposal-in-rashtriya-lok-adalat-shimoga/

Leave a Reply

Your email address will not be published. Required fields are marked *

error: Content is protected !!