KARNATAKA SANGHA | ಕರ್ನಾಟಕ ಸಂಘದ ಪುಸ್ತಕ ಬಹುಮಾನ ವಿಜೇತರ ಪಟ್ಟಿ ಪ್ರಕಟ

Karnataka sangha

 

 

ಸುದ್ದಿ ಕಣಜ.ಕಾಂ | KARNATAKA | 26 AUG 2022
ಶಿವಮೊಗ್ಗ: ಕರ್ನಾಟಕ ಸಂಘವು 2021ನೇ ಸಾಲಿನ ಪುಸ್ತಕ ಬಹುಮಾನ ವಿಜೇತರ ಪಟ್ಟಿ(prize winners books list)ಯನ್ನು ಪ್ರಕಟಿಸಿದೆ.
ಈ ಕುರಿತು ಕರ್ನಾಟಕ ಸಂಘದಲ್ಲಿ ಶುಕ್ರವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್  (MN Sundarraj) ಅವರು ಪಟ್ಟಿಯನ್ನು ಬಿಡುಗಡೆ ಮಾಡಿದರು.
ಬಹುಮಾನವು 10 ಸಾವಿರ ರೂಪಾಯಿ ಬಹುಮಾನವನ್ನು ಒಳಗೊಂಡಿದೆ. ಪ್ರತಿ ವರ್ಷ 12 ಬಹುಮಾನಗಳನ್ನು ನೀಡುತ್ತಾ ಬರಲಾಗುತ್ತಿದೆ. ಈ ಸಲ 325 ಪುಸ್ತಕಗಳು ಬಂದಿದ್ದವು. ಅದರಲ್ಲಿ ಅತ್ಯಂತ ಪಾರದರ್ಶಕವಾಗಿ ಗುಣಮಟ್ಟ ಕಾಪಾಡಿಕೊಂಡು ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

READ | ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ, ಶ್ರೀಗಳು ನೀಡಿದ ಎಚ್ಚರಿಕೆ ಏನು?

ಬಹುಮಾನ ವಿಜೇತರ ಪಟ್ಟಿ
ಬಹುಮಾನಗಳ ಪೈಕಿ 9 ಅನ್ನು ಸಂಘದ ಗೌರವ ಸದಸ್ಯರ ಹೆಸರಿನಲ್ಲಿ ನೀಡಲಾಗುತ್ತದೆ.

  1. ಕಾದಂಬರಿ (ಕುವೆಂಪು)- ವೈಷ್ಣವ ಜನತೋ-ಲೋಕೇಶ್ ಅಗಸನಕಟ್ಟೆ (ಚಿತ್ರದುರ್ಗ)
  2. ಅನುವಾದ (ಎಸ್.ವಿ.ಪರಮೇಶ್ವರಭಟ್ಟ)- ಪ್ರೇಮಪತ್ರ-ಡಾ.ಎ.ಮೋಹನ್ ಕುಂಟಾರ್, ಹಂಚಿ, ವಿದ್ಯಾರಣ್ಯ
  3. ಮಹಿಳಾ ಲೇಖಕರು(ಎಂ.ಕೆ.ಇಂದಿರಾ)- ಆಮೆ- ಸ್ನೇಹಲತಾ ದಿವಾಕರ್ ಕುಂಬ್ಳೆ, ಕಾಸರಗೋಡ, ಕೇರಳ
  4. ಮುಸ್ಲಿಂ ಲೇಖಕರು(ಪಿ.ಲಂಕೇಶ್)- ಭಾರತೀಯ ಧರ್ಮ- ಡಾ.ಸರ್ಫರಾಜ್ ಚಂದ್ರಗುತ್ತಿ, ಸಾಗರ
  5. ಕವನ ಸಂಕಲನ(ಜಿ.ಎಸ್.ಶಿವರುದ್ರಪ್ಪ)- ಶಯ್ಯಾಗೃಹದ ಸುದ್ದಿಗಳು- ಡಾ.ಶೋಭಾ ನಾಯಕ, ಬೆಳಗಾವಿ
  6. ಅಂಕಣ ಬರಹ(ಹಾ.ಮಾ.ನಾಯಕ)- ಓದಿನ ಮನೆ- ದೀಪಾ ಫಡ್ಕೆ, ಬೆಂಗಳೂರು
  7. ಸಣ್ಣ ಕಥೆ(ಯು.ಆರ್.ಅನಂತಮೂರ್ತಿ)- ಬೊಗಸೆ ತುಂಬ ನಕ್ಷತ್ರಗಳು- ವಸುಮತಿ ಉಡುಪ, ಮೈಸೂರು
  8. ನಾಟಕ(ಕೆ.ವಿ.ಸುಬ್ಬಣ್ಣ)- ಪಂಚಾವರಂ- ಮಹಾಂತೇಶ್ ನವಲಕಲ್, ಕಲಬುರಗಿ
  9. ಪ್ರವಾಸ ಸಾಹಿತ್ಯ(ಕುಕ್ಕ ಸುಬ್ರಹ್ಮಣ್ಯ ಶಾಸ್ತ್ರಿ)- ತಿರೆಯ ತೀರಗಳಲ್ಲಿ ನಾ ಕಂಡೆ- ಎಸ್.ಪಿ.ವಿಜಯಲಕ್ಷ್ಮೀ, ಬೆಂಗಳೂರು
  10. ವಿಜ್ಞಾನ ಸಾಹಿತ್ಯ(ಹಸೂಡಿ ವೆಂಕಟಶಾಸ್ತ್ರಿ)- ಡೇಟಾ ದೇವರು ಬಂದಾಯ್ತು- ಗುರುರಾಜ್ ಎಸ್.ದಾವಣಗೆರೆ, ಬೆಂಗಳೂರು
  11. ಮಕ್ಕಳ ಸಾಹಿತ್ಯ(ನಾ.ಡಿಸೋಜಾ)- ಕಥೆಗಳ ತೋರಣ ಭಾಗ 2- ಶಾಲಿನಿಮೂರ್ತಿ, ಬೆಂಗಳೂರು
  12. ವೈದ್ಯ ಸಾಹಿತ್ಯ(ಎಚ್.ಡಿ.ಚಂದ್ರಪ್ಪಗೌಡ)- ಮಧುಮೇಹದೊಂದಿಗೆ ಮಧುರ ಬಾಳ್ವೆ, ಡಾ.ಕೃಷ್ಣ ಎಸ್.ಭಟ್, ಭದ್ರಾವತಿ

ಮಾಧ್ಯಮಗೋಷ್ಠಿಯಲ್ಲಿ ಕರ್ನಾಟಕ ಸಂಘದ ಉಪಾಧ್ಯಕ್ಷ ಪ್ರೊ.ಎಚ್.ಆರ್.ಶಂಕರನಾರಾಯಣಶಾಸ್ತ್ರಿ, ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ, ಕೋಶಾಧ್ಯಕ್ಷ ಎಚ್.ಡಿ.ಮೋಹನಶಾಸ್ತ್ರಿ, ಪ್ರಮುಖರಾದ ಡಾ.ಎಸ್.ನಾಗಮಣಿ, ಚಕ್ರಪಾಣಿ, ವಿನಯ್ ಶಿವಮೊಗ್ಗ ಉಪಸ್ಥಿತರಿದ್ದರು.

https://suddikanaja.com/2021/07/31/independance-day-special-offer-on-books-purchase/

Leave a Reply

Your email address will not be published. Required fields are marked *

error: Content is protected !!