ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ, ಶಿವಮೊಗ್ಗದಲ್ಲಿ ಕೊರೊನಾ ಸೋಂಕು ಮತ್ತೆ ಏರಿಕೆಯಾಗಿದೆ. ಸೋಮವಾರ ಭದ್ರಾವತಿಯಲ್ಲಿ ಪಾಸಿಟಿವ್ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಇಂದು ಮತ್ತೆ ನೂರರ ಗಡಿ ದಾಟಿದೆ.
ಮಂಗಳವಾರ 631 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅದರಲ್ಲಿ 28 ವಿದ್ಯಾರ್ಥಿಗಳು, 9 ಸಿಬ್ಬಂದಿ ಇದ್ದಾರೆ. 1016 ಜನ ಗುಣಮುಖರಾಗಿದ್ದಾರೆ. 13 ಜನ ಮೃತಪಟ್ಟಿದ್ದಾರೆ.
3,089 ಮಾದರಿಯನ್ನು ಪಡೆದಿದ್ದು, 1,612ನೆಗೆಟಿವ್ ಬಂದಿವೆ. ಮೆಗ್ಗಾನ್ ನಲ್ಲಿ 642 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್ಸಿಯಲ್ಲಿ 346, ಕೋವಿಡ್ ಕೇರ್ ಸೆಂಟರ್ನಲ್ಲಿ 1,377, ಖಾಸಗಿ ಆಸ್ಪತ್ರೆಯಲ್ಲಿ 1,324, ಹೋಮ್ ಐಸೋಲೇಷನ್ ನಲ್ಲಿ 2,153, ಟ್ರಿಯೇಜ್ ನಲ್ಲಿ 752 ಜನ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,979 ಇದೆ.
ತಾಲೂಕುವಾರು ವರದಿ | ಶಿವಮೊಗ್ಗ 275, ಭದ್ರಾವತಿ 115, ತೀರ್ಥಹಳ್ಳಿ 56, ಶಿಕಾರಿಪುರ 55, ಸಾಗರ 52, ಹೊಸನಗರ 19, ಸೊರಬ 43, ಬಾಹ್ಯ ಜಿಲ್ಲೆಯ 16 ಪ್ರಕರಣಗಳಿವೆ.
https://www.suddikanaja.com/2021/05/29/covid-death-case-increase-in-shivamogga-2/