Agumbe Ghat | ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ, ಎಷ್ಟು ದಿನ ಆದೇಶ‌ ಅನ್ವಯ?

Agumbe Ghat

 

 

ಸುದ್ದಿ ಕಣಜ.ಕಾಂ | DISTRICT | 30 AUG 2022
ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಪದೇ ಪದೆ ಗುಡ್ಡ ಕುಸಿತದಂತಹ ಘಟನೆಗಳು ನಡೆಯುತಿದ್ದು, ಈ ಹಿನ್ನೆಲೆ ಭಾರಿ ವಾಹನಗಳ ಸಂಚಾರವನ್ನು ಸೆಪ್ಟೆಂಬರ್ 30ರ ವರೆಗೆ ನಿಷೇಧಿಸಲಾಗಿದೆ.
ನಿಷೇಧ ಆದೇಶ ವಿಸ್ತರಣೆ
ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದ ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಭೂಕುಸಿತವಾಗಿದ್ದ ಹಿನ್ನೆಲೆಯಲ್ಲಿ ಆಗುಂಬೆ ಘಾಟಿ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಪರ್ಯಾಯ ಮಾರ್ಗ ಕಲ್ಪಿಸುವ ವಿಚಾರದ ಕುರಿತು ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗದ ಕಾರ್ಯಪಾಲಕ ಎಂಜಿನಿಯರ್ ಅವರು ಜುಲೈ 29ರ ಪತ್ರದಲ್ಲಿ ಕೋರಿದಂತೆ ಆಗಸ್ಟ್ 1ರಿಂದ 31ರ ವರೆಗೆ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಲಘು ವಾಹನ ಮತ್ತು ಬಸ್ ಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿ ಆದೇಶಿಸಲಾಗಿತ್ತು.
ಮುಂದುವರಿದು, ಕಾರ್ಯಪಾಲಕ ಎಂಜಿನಿಯರ್ ಅವರು ಈ ಭಾಗದಲ್ಲಿ ಅಗಾಗ್ಗೆ ಮಳೆ ಆಗುತ್ತಿದ್ದು, ಭೂಕುಸಿತ ಉಂಟಾಗುವ ಸಾಧ್ಯತೆ ಇರುವ ಕಾರಣ ಸೆ.30ರ ವರೆಗೆ ಭಾರಿ ವಾಹನಗಳ ಓಡಾಟವನ್ನು ನಿಷೇಧಿಸಿ, ಲಘು ವಾಹನ ಹಾಗೂ ಬಸ್ ಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿ ಆದೇಶ ವಿಸ್ತರಿಸಿ ಹೊರಡಿಸುವಂತೆ ಪತ್ರದಲ್ಲಿ ವರದಿ ಸಲ್ಲಿಸಿರುತ್ತಾರೆ. ಹೀಗಾಗಿ‌,‌ ನಿಷೇಧವನ್ನು ವಿಸ್ತರಿಸಲಾಗಿದೆ.

https://suddikanaja.com/2022/03/03/dc-dr-r-selvamani-order-to-prohibit-light-and-heavy-vehicle-movement-in-agumbe-ghat/

Leave a Reply

Your email address will not be published. Required fields are marked *

error: Content is protected !!