Sharavathi launch | ಶರಾವತಿ ಹಿನ್ನೀರಿನ ಲಾಂಚ್ ತಡೆಗೆ ನಿರ್ಧಾರ, ಕಾರಣವೇನು?

sharavathi launch

 

 

HIGHLIGHTS 

  • ಸೆಪ್ಟೆಂಬರ್ 20ರೊಳಗೆ ಸಂಬಳ ಪಾವತಿಸಬೇಕು, ಇಲ್ಲದಿದ್ದರೆ 22ರಂದು ಲಾಂಚ್ ಸೇವೆ ತಡೆದು ಪ್ರತಿಭಟನೆಯ ಎಚ್ಚರಿಕೆ
  • ಸಿಗಂದೂರು ಲಾಂಚ್ ನಿಲ್ದಾಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಂಡ ಸಿಬ್ಬಂದಿ
  • ಶರಾವತಿ ಹಿನ್ನೀರು ಪ್ರದೇಶದಲ್ಲಿ ಏಳು ಲಾಂಚ್’ಗಳಿದ್ದು, 17 ಜನರ ಕಾರ್ಯನಿರ್ವಹಣೆ

ಸುದ್ದಿ ಕಣಜ.ಕಾಂ | DISTRICT | 10 SEP 2022
ಶಿವಮೊಗ್ಗ: ಶರಾವತಿ ಹಿನ್ನೀರಿನ ಮುಪ್ಪಾನೆ, ಹಸಿರುಮಕ್ಕಿ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಾಂಚ್ ನೌಕರರಿಗೆ ಸಂಬಳ ಪಾವತಿ ಮಾಡದೇ ಇರುವುದರಿಂದ ಸೆಪ್ಟೆಂಬರ್ 22ರಂದು ಲಾಂಚ್ ತಡೆದು ಪ್ರತಿಭಟಿಸಲು ನಿರ್ಧರಿಸಲಾಗಿದೆ.
ಜನಪರ ಹೋರಾಟ ವೇದಿಕೆ ಹಾಗೂ ಕಾಗೋಡು ಜನಪರ ವೇದಿಕೆಯು ಸಿಗಂದೂರು ಲಾಂಚ್ ನಿಲ್ದಾಣದಲ್ಲಿ ಸಮಾಲೋಚನಾ ಸಭೆ ನಡೆಸಿ ತೀರ್ಮಾನಿಸಲಾಗಿದೆ.

READ | ಶಿವಮೊಗ್ಗಕ್ಕೆ ಇನ್ನೊಂದು ಹೊಸ ರೈಲು, ಯಾವಾಗಿಂದ ಸೇವೆ ಲಭ್ಯ? ವೇಳಾಪಟ್ಟಿ ಇಲ್ಲಿದೆ

7 ಲಾಂಚ್ 17 ಸಿಬ್ಬಂದಿ
ಶರಾವತಿ ಹಿನ್ನೀರು ಪ್ರದೇಶದಲ್ಲಿ ಏಳು ಲಾಂಚ್’ಗಳಿದ್ದು, 17 ಜನ ಅರೆಕಾಲಿಕ ಸಿಬ್ಬಂದಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಂಚ್’ಗಳು ದ್ವೀಪದ ಜರು ಹಾಗೂ ಸಿಗಂದೂರು ದೇವಸ್ಥಾನದ ಭಕ್ತಾದಿಗಳಿಗೆ ಸೇವೆ ಒದಗಿಸುತ್ತಿದೆ.
ಲಾಂಚ್ ಸಿಬ್ಬಂದಿಯ ಬೇಡಿಕೆಗಳೇನು?
ಲಾಂಚ್ ಸಿಬ್ಬಂದಿಗೆ ಬಾಕಿ ಇರುವ ಸಂಬಳವನ್ನು ಸೆಪ್ಟೆಂಬರ್ 20ರೊಳಗೆ ಪಾವತಿಸಬೇಕು. ಇಲ್ಲದಿದ್ದರೆ 22ರಂದು ಲಾಂಚ್ ತಡೆದು ಪ್ರತಿಭಟನೆ ಮಾಡಲಾಗುವುದು. ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜನಪರ ಹೋರಾಟ ವೇದಿಕೆಯ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ್, ಕಾಗೋಡೆ ಜನಪರ ವೇದಿಕೆಯ ಅಧ್ಯಕ್ಷ ಗಣೇಶ್ ಜಾಕಿ, ಹೊಳೆಬಾಗಿಲು ವಾಹನ ಮಾಲೀಕ ಸಂಘದ ಅಧ್ಯಕ್ಷ ಮಹೇಶ್, ಸಹಮತ ವೇದಿಕೆಯ ಅಣ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

https://suddikanaja.com/2022/04/21/radio-shimoga-community-banuli-center-which-has-already-been-commissioned-will-officially-launch-on-april-22/

Leave a Reply

Your email address will not be published. Required fields are marked *

error: Content is protected !!