Political news | ಬಿ.ಎಸ್.ಯಡಿಯೂರಪ್ಪ ಕುಟುಂಬವನ್ನು ಭ್ರಷ್ಟಾಚಾರ ಪ್ರಕಣದಲ್ಲಿ ಸಿಲುಕಿಸುವ ಪ್ರಯತ್ನ, ಆರೋಪ

ಬಿ.ವೈ.ರಾಘವೇಂದ್ರ

 

 

HIGHLIGHTS

  • ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಪ್ರಯುಕ್ತ ಶಿವಮೊಗ್ಗ ಜಿಲ್ಲೆಯಲ್ಲಿ‌ ‘ಸೇವಾ ಸಪ್ತಾಹ’ ಕಾರ್ಯಕ್ರಮ
  • ಸೆಪ್ಟೆಂಬರ್ 17 ರಿಂದ ಜಿಲ್ಲಾ ಮತ್ತು ಬೂತ್ ಮಟ್ಟದಲ್ಲಿ ವಿವಿಧ ಬಗೆಯ ಸೇವಾ ಕಾರ್ಯಕ್ರಮಗಳ ಆಯೋಜನೆ
  • ಸೆ. 17 ರಂದು ಜಿಲ್ಲೆಯ 1,020 ವಿಕಲಚೇತನ ಫಲಾನುಭವಿಗಳಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ

ಸುದ್ದಿ ಕಣಜ.ಕಾಂ | DISTRICT | 15 SEP 2022
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಕುಟುಂಬವನ್ನು ಬಿಡಿಎ(BDA) ವಸತಿ ಯೋಜನೆಯಡಿ ಗುತ್ತಿಗೆ ನೀಡಿಕೆ ಪ್ರಕರಣದಲ್ಲಿ ಸಿಲುಕಿಸುವುದಕ್ಕೆ ಹಿಂದಿನಿಂದಲೂ ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ (BY Raghavendra) ಆರೋಪಿಸಿದರು.

READ | ಶಿವಮೊಗ್ಗದಲ್ಲಿ ಉದ್ಯೋಗ ಅವಕಾಶ, ಯಾರೆಲ್ಲ‌ಅರ್ಜಿ ಸಲ್ಲಿಸಬಹುದು?

ಗುರುವಾರ ಬಿಜೆಪಿ ಕಚೇರಿ(BJP Office)ಯಲ್ಲಿ ಗುರುವಾರ ಮಾಧ್ಯಮಗೋಷ್ಠಿ‌ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಮ್ಮ ಕುಟುಂಬದ ವಿರುದ್ಧ ಮೊದಲಿನಿಂದಲೂ ಕೆಲವು ವ್ಯಕ್ತಿಗಳು ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ಪ್ರಕರಣ ಸಂಬಂಧ ಕಾನೂನು ರೀತಿ ತನಿಖೆ ನಡೆಯಲಿ. ಇದರಲ್ಲಿ ನಮ್ಮ ಕುಟುಂಬದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.
ಸೆಪ್ಟೆಂಬರ್ 17ರಿಂದ ಅ.15ರವರೆಗೆ ಸೇವಾ ಪಾಕ್ಷಿಕ
ಪ್ರಧಾನಮಂತ್ರಿ ನರೇಂದ್ರಮೋದಿ(Narendra Modi), ಪಂಡಿತ್ ದೀನದಯಾಳು ಹಾಗೂ ಮಹಾತ್ಮಗಾಂಧಿ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 17 ರಿಂದ ಅಕ್ಡೋಬರ್ 2ರ ವರೆಗೆ ಜಿಲ್ಲೆಯಾದ್ಯಂತ ಸೇವೆಗಾಗಿ 15 ಎಂಬ ‘ಸೇವಾಪಾಕ್ಷಿಕ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಮತ್ತು ಬೂತ್ ಮಟ್ಟದಲ್ಲಿ ವಿವಿಧ ಬಗೆಯ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ರಾಘವೇಂದ್ರ ತಿಳಿಸಿದರು.
ಸೇವಾ ಸಪ್ತಾಹದಲ್ಲಿ‌ ಏನೇನು ಕಾರ್ಯಕ್ರಮ?
ಸೆ. 17 ರಂದು ಜಿಲ್ಲೆಯ 1,020 ವಿಕಲಚೇತನ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು. ಹೀಗೆ ಹತ್ತು ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೇಯರ್ ಸುನೀತಾ ಅಣ್ಣಪ್ಪ, ಪ್ರಮುಖರಾದ ಗಿರೀಶ್ ಪಟೇಲ್, ಶಿವರಾಜ್, ಜಗದೀಶ್, ಹೃಷಿಕೇಶ್ ಪೈ, ಮಾಲತೇಶ್, ಅಣ್ಣಪ್ಪ, ವಿದ್ಯಾ ಲಕ್ಷ್ಮೀಪತಿ, ವಿನ್ಸೆಂಟ್, ಸತೀಶ್, ವಾಗೀಶ್, ಕುಪೇಂದ್ರ ಇದ್ದರು.

https://suddikanaja.com/2022/09/10/it-has-been-decided-to-stop-the-launch-and-protest-at-sharavathi-back-water/

Leave a Reply

Your email address will not be published. Required fields are marked *

error: Content is protected !!