Shikaripura | ಕಿರುಕುಳ ತಾಳಲಾಗದೇ ಆತ್ಮಹತ್ಯೆ ಮಾಡಿಕೊಂಡ ಯುವಕ

Suicide hanging

 

 

HIGHLIGHTS

  • ಹಣಕ್ಕಾಗಿ ಕಿರುಕುಳ‌ ನೀಡುತ್ತಿದ್ದರಿಂದ ಆತ್ಮಹತ್ಯೆಗೆ ಶರಣಾದ ಯುವಕನ‌ತಂದೆಯಿಂದ ಶಿಕಾರಿಪುರ ಠಾಣೆಗೆ ದೂರು
  • 2019 ರಲ್ಲಿ ಮದನ್ ಕುಮಾರ್ ವಿರುದ್ಧ ದಾಖಲಾಗಿತ್ತು ಪೋಯ, ಅಟ್ರಾಸಿಟಿ ಕೇಸ್

ಸುದ್ದಿ ಕಣಜ.ಕಾಂ | DISTRICT | 17 SEP 2022
ಶಿವಮೊಗ್ಗ: ಹಿತ್ತಲ ಗ್ರಾಮದ ರಸ್ತೆಯ ಅಂಚಿನಲ್ಲಿರುವ ಕೌಲ್ ಮರದ ಕೊಂಬೆಗೆ ನೇಣು ಹಾಕಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ‌ ಘಟನೆ ಇತ್ತೀಚೆಗೆ ನಡೆದಿದೆ.
ಹಿತ್ತಲ ಗ್ರಾಮದ ನಿವಾಸಿ ಮದನ್‌ ಕುಮಾರ್‌(26) ಆತ್ಮಹತ್ಯೆ ಮಾಡಿಕೊಂಡವರು.

READ | ಯುವಕನಿಗೆ 1 ವರ್ಷ ಜೈಲು, ₹30,000 ದಂಡ

2019 ರಲ್ಲಿ ಮದನ್ ಕುಮಾರನ ವಿರುದ್ಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಮತ್ತು ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿತ್ತು. ಈ ವಿಚಾರವಾಗಿ ಆತನಿಗೆ ಅದೇ ಗ್ರಾಮದ ಕೆಲವರು ಹಣ ಕೊಡುವಂತೆ ಪೀಡಿಸುತ್ತಿದ್ದರಿಂದ ಇವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಮೃತನ ತಂದೆ ನೀಡಿದ ದೂರಿನ ಮೇರೆಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!