Arecanut | ಅಡಿಕೆ‌ ಬೆಳೆಗಾರರಿಗೆ ಶುಭ ಸುದ್ದಿ, ಉಚಿತ ಔಷಧಿ, ಸಲಕರಣೆ ಖರೀದಿಗೆ ಸಹಾಯಧನ

arecanut

 

 

HIGHLIGHTS

  • ಅಡಕೆ ಬೆಳೆಯ ಎಲೆಚುಕ್ಕೆ ರೋಗ ಭಾದೆ ನಿಯಂತ್ರಿಸಲು ರೈತರಿಗೆ ಉಚಿತ ಔಷಧಿ ಪೂರೈಕೆ ಹಾಗೂ ಸಲಕರಣೆ ಪಡೆಯಲು ಸಹಾಯಧನ
  • ಬೆಂಗಳೂರಿನಲ್ಲಿ ತೋಟಗಾರಿಕಾ ಸಚಿವ ಮುನಿರತ್ನ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಜಂಟಿ ಮಾಧ್ಯಮಗೋಷ್ಠಿ

ಸುದ್ದಿ ಕಣಜ.ಕಾಂ | KARNATAKA | 17 SEP 2022
ಬೆಂಗಳೂರು(Bengaluru): ಮಲೆನಾಡಿನ (Malenadu) ಕೆಲವು ಭಾಗಗಳಲ್ಲಿ ರೈತರ ಬೆನ್ನೆಲುಬಾಗಿರುವ ಅಡಿಕೆ (Arecanut) ಬೆಳೆಗೆ ಎಲೆ ಚುಕ್ಕೆ ರೋಗ (areca palm leaf spot disease) ಬಾಧೆ ಕಾಣಿಸಿಕೊಂಡಿದ್ದು, ರೈತ ಸಮುದಾಯದಲ್ಲಿ ಆತಂಕದ ಛಾಯೆ ಮೂಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ (arecanut task force) ಅಧ್ಯಕ್ಷರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ (araga jnanendra) ಹಾಗೂ ತೋಟಗಾರಿಕಾ ಸಚಿವ ಮುನಿರತ್ನ (Munirayna) ಅವರು, ತೋಟಗಾರಿಕಾ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ರೋಗ ನಿಯಂತ್ರಣದ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು.

VIDEO REPORT

READ | ಶಿವಮೊಗ್ಗ ರಾಶಿ ಅಡಿಕೆ ದರದಲ್ಲಿ ತುಸು ಏರಿಕೆ, 16/09/2022ರ ಅಡಿಕೆ ಧಾರಣೆ

ರೋಗ ಬಾಧೆಯಿಂದ ಹಾನಿ ಅನುಭವಿಸಿದ ರೈತರಿಗೆ, ಆರ್ಥಿಕ ಪರಿಹಾರ ಒದಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸುಧಾರಿತ ದೋಟಿ ಒದಗಿಸಲು ಕ್ರಮ
ಎಲೆ ಚುಕ್ಕೆ ರೋಗವನ್ನು ಹತೋಟಿಗೆ ತರುವ ಬಗ್ಗೆ ರೈತರಿಗೆ, ಉಚಿತವಾಗಿ ಔಷದಿ ಹಾಗೂ ಸುಧಾರಿತ ದೋಟಿಯನ್ನು ಒದಗಿಸುವ ಬಗ್ಗೆ ಅಧಿಕಾರಿಗಳಿಗೆ, ನಿರ್ದೇಶನ ನೀಡುವುದಾಗಿ ಸಚಿವ ಮುನಿರತ್ನ ತಿಳಿಸಿದರು.
ಎಷ್ಟು ಪ್ರಮಾಣದಲ್ಲಿ ಅಡಿಕೆ ಬೆಳೆ, ಎಲೆಚುಕ್ಕೆ ರೋಗದಿಂದಾಗಿ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷಾ ಕಾರ್ಯ ನಡೆಸುವ ಬಗ್ಗೆಯೂ ನಿರ್ಧರಿಸಲಾಯಿತು.
ಎಲೆಚುಕ್ಕೆ ರೋಗ ಬಾಧೆಯ ತೀವ್ರತೆಯ ಬಗ್ಗೆ ಪ್ರಸ್ತಾಪಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ತಕ್ಷಣವೇ ರೋಗವನ್ನು ಹತೋಟಿಗೆ ತರಲು ಅನುಕೂಲವಾಗುವಂತೆ, ರೈತರಿಗೆ, ಉಚಿತವಾಗಿ ಔಷದಿ ಹಾಗೂ ಇತರ ಸಹಾಯವನ್ನು ಸರಕಾರದಿಂದ ನೀಡಲಾಗುವುದು ಎಂದು ತಿಳಿಸಿದರು.
ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್.ಅಂಗಾರ ಹಾಗೂ ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

https://suddikanaja.com/2022/09/14/areca-leaf-spot-management/

Leave a Reply

Your email address will not be published. Required fields are marked *

error: Content is protected !!