Campus Interview | ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಕ್ಯಾಂಪಸ್ ಸಂದರ್ಶನ

Kuvempu university

 

 

HIGHLIGHTS 

  • ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಕ್ಯಾಂಪಸ್ ಸಂದರ್ಶನ
  • ಭವಿಷ್ಯದ ಪತ್ರಕರ್ತರಿಗೆ ಸಲಹೆ ನೀಡಿದ ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ

ಸುದ್ದಿ ಕಣಜ.ಕಾಂ | DISTRICT | 24 SEP 2022
ಶಿವಮೊಗ್ಗ(shivamogga): ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಶನಿವಾರ ಈ ಟಿವಿ ಭಾರತ್ ಕ್ಯಾಂಪಸ್ ಸಂದರ್ಶನ ಜರುಗಿತು.
ಈ ವೇಳೆ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ (Kuvempu university) ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ(Prof B P Veerabhadrappa), ವಿಘಟನೆಯ ಆತಂಕಕಾರಿ ಹಾದಿಯಲ್ಲಿ ಸಾಗುತ್ತಿರುವ ಸಮಕಾಲೀನ ಸಮಾಜವನ್ನು ರಚನಾತ್ಮಕವಾಗಿ ಕಟ್ಟುವ ಗುರುತರ ಜವಾಬ್ದಾರಿ ಭವಿಷ್ಯದ ಪತ್ರಕರ್ತರು (Journalist) ನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

READ | ಶಿವಮೊಗ್ಗ ವಿಮಾನ ನಿಲ್ದಾಣ ಹಾರಾಟಕ್ಕೆ ಡೇಟ್ ಫಿಕ್ಸ್, ಯಾವ್ಯಾವ ಕೆಲಸ ಇನ್ನೂ ಬಾಕಿ?, ಲೋಕಾರ್ಪಣೆಗೆ ಮೋದಿ ಆಗಮನ ಸಾಧ್ಯತೆ

ಕಳೆದ ದಶಕದಿಂದೀಚೆಗೆ ಎಲ್ಲ ಮಾಧ್ಯಮ ಸಂಸ್ಥೆಗಳು ಡಿಜಿಟಲ್ ವೇದಿಕೆಯನ್ನು ಪ್ರವೇಶಿಸುತ್ತಿವೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಬಲ ಟಿ.ವಿ ವಾಹಿನಿಗಳ ಸಮೂಹವನ್ನು ಹೊಂದಿದ್ದ ರಾಮೋಜಿ ರಾವ್ ಒಡೆತನದ ಈ-ಟಿವಿ, ಡಿಜಿಟಲ್ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಕಾಲಿರಿಸಿದ ಮೊದಲ ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆ ಎಂದರೆ ತಪ್ಪಾಗಲಾರದು. ಭವಿಷ್ಯದಲ್ಲಿ ಪತ್ರಿಕೋದ್ಯಮವನ್ನು ಡಿಜಿಟಲ್ ಮಾಧ್ಯಮ (Digital media) ಆವರಿಸಿಕೊಳ್ಳಲಿದೆ.
| ಪ್ರೊ.ಡಿ.ಎಸ್.ಪೂರ್ಣಾನಂದ್, ಪ್ರಾಧ್ಯಾಪಕ

ಪ್ರಜಾತಂತ್ರ ವ್ಯವಸ್ಥೆಯ ಪ್ರಮುಖ ಅಂಗವಾಗಿರುವ ಪತ್ರಿಕಾ ರಂಗಕ್ಕೆ ಕಾಲಿಡಲಿರುವ ಉದಯೋನ್ಮುಖ ಪತ್ರಕರ್ತರು ಸಮಾಜವನ್ನು ಒಗ್ಗೂಡಿಸುವ ಕಾರ್ಯನಿರ್ವಹಿಸಬೇಕಿದೆ. ಜಾತಿ, ಧರ್ಮ, ಸಮುದಾಯಗಳ ನಡುವಿನ ಬಿರುಕುಗಳನ್ನು ಗುಣಪಡಿಸುವ ಹೊಣೆಗಾರಿಕೆ ಅವರ ಮೇಲಿದೆ ಎಂದರು.
ವಿಭಾಗದ ಮುಖ್ಯಸ್ಥ ಡಾ.ಸತೀಶ್ ಕುಮಾರ್, ಡಾ.ಎಂ.ಆರ್. ಸತ್ಯಪ್ರಕಾಶ್, ಈ ಟಿವಿ ಭಾರತ್‍ನ ಶಿವಮೊಗ್ಗ ಜಿಲ್ಲಾ ವರದಿಗಾರ ಕಿರಣ್ ಕುಮಾರ್, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

https://suddikanaja.com/2022/09/23/shivamogga-sp-bm-lakshmi-prasad-press-meet-on-arrest-of-suspected-terrorist-at-shimoga/

Leave a Reply

Your email address will not be published. Required fields are marked *

error: Content is protected !!