Shivamogga Dasara | ಮೂರು ವರ್ಷಗಳ ಬಳಿಕ ನಡೆದ ಜಂಬೂ ಸವಾರಿ, ಈ ವರ್ಷದ ಶಿವಮೊಗ್ಗ ದಸರಾ ವಿಶೇಷಗಳೇನು?

shivamogga dasara 4

 

 

ಸುದ್ದಿ ಕಣಜ.ಕಾಂ | DISTRICT | 06 OCT 2022
ಶಿವಮೊಗ್ಗ(Shivamogga): ಕೋವಿಡ್ ಕಾಯಿಲೆ ವ್ಯಾಪಕವಾಗಿ ಹರಡಿದ್ದ ಪರಿಣಾಮ ಶಿವಮೊಗ್ಗದಲ್ಲಿ ಕಳೆದ ಮೂರು ವರ್ಷಗಳಿಂದ ಜಂಬೂ ಸವಾರಿ ಮಾಡಲಾಗಿರಲಿಲ್ಲ. ಆದರೆ, ಈ ಸಲ ಅತ್ಯಂತ ವಿಜೃಂಬಣೆಯಿಂದ ಹಬ್ಬ ಆಚರಿಸಲಾಯಿತು. ಅಂಬಾರಿ ಹೊತ್ತಿದ ಸಾಗರನೊಂದಿಗೆ ಹೆಣ್ಣಾನೆಗಳಾದ ಭಾನುಮತಿ ಮತ್ತು ನೇತ್ರಾವತಿ ಹೆಜ್ಜೆ ಹಾಕಿದವು.

READ | ಶಿರಾಳಕೊಪ್ಪದಲ್ಲಿ ಭೂ ಕಂಪಿಸಿದ ಅನುಭವ, ಸುಳ್ಳು ಸುದ್ದಿಯಿಂದಲೇ ಹೆಚ್ಚಿದ ಗಾಬರಿ, ಅಧಿಕಾರಿಗಳೇನು ಹೇಳ್ತಾರೆ?

ಮಂಗಳವಾದ್ಯ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ನೂರಕ್ಕೂ ಹೆಚ್ಚು ದೇವರುಗಳ ಮೆರವಣಿಗೆ ನಡೆಯಿತು. ನಂತರ, ಎಲ್ಲ ದೇವರುಗಳ ಫ್ರೀಡಂ ಪಾರ್ಕ್’ಗೆ ತಲುಪಿದವು. ಅವುಗಳ ಸಮ್ಮುಖದಲ್ಲಿ ತಹಸೀಲ್ದಾರ್ ನಾಗರಾಜ್ ಅವರು ಅಂಬು ಛೇದನ ಮಾಡಿದರು.
ಡಾ.ಸುಬ್ನಳ್ಳಿರಾಜು ಕಲಾತಂಡದವರು ಜಾನಪದ ಗೀತಗಾಯನ ನಡೆಸಿಕೊಟ್ಟರು. ಚಂಡಿಕಾದುರ್ಗ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

https://suddikanaja.com/2022/10/05/shivamogga-ready-for-vijaya-dashami/

Leave a Reply

Your email address will not be published. Required fields are marked *

error: Content is protected !!