Crime news | ಇಲಿಯಾಸ್‌ ನಗರದಲ್ಲಿ ಯುವಕನ‌ ಮೇಲೆ‌ ಮಾರಕಾಸ್ತ್ರಗಳಿಂದ ಹಲ್ಲೆ

CRIME NEWS SK

 

 

ಕಣಜ.ಕಾಂ | SHIMOGA CITY | 10 OCT 2022
ಶಿವಮೊಗ್ಗ(Shivamogga): ಬರ್ತ್ ಡೇ ಪಾರ್ಟಿಗೆ ಬಂದ‌ ಯುವಕನಿಗೆ ಮಾರಕಾಸ್ತ್ರಗಳಿಂದ ಚುಚ್ಚಿರುವ ಘಟನೆ ಸೋಮವಾರ ಸಂಜೆ ಇಲಿಯಾಸ್ ನಗರದಲ್ಲಿ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂಡಿ ಮುಸಾನ್(21) ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಈತ ಮೂಲತಃ ಶಿವಮೊಗ್ಗದವನೇ ಆಗಿದ್ದು, ಚನ್ನಗಿರಿಯಲ್ಲಿ ವಾಸವಾಗಿದ್ದ.

READ | ಶಿವಮೊಗ್ಗ ಮೃಗಾಲಯದಲ್ಲಿ‌ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬೇಕೇ? ಕೂಡಲೇ ಸಂಪರ್ಕಿಸಿ

ಬರ್ತ್ ಡೇ ಪಾರ್ಟಿಗೆ ಬಂದಿದ್ದ ಮುಸಾನ್
ಬರ್ತ್ ಡೇ ಪಾರ್ಟಿಗೋಸ್ಕರ ಶಿವಮೊಗ್ಗಕ್ಕೆ‌ ಬಂದಿದ್ದು, ಆಗ ಟಿಪ್ಪು ನಗರದ ನಿವಾಸಿ ರೌಡಿಶೀಟರ್ ಸೈಯದ್ ರಾಝಿಕ್ (29) ಎಂಬಾತ ಹಲ್ಲೆ‌ ಮಾಡಿದ್ದಾನೆ. ಹಲ್ಲೆಗೆ ಖಚಿತ ಕಾರಣ ತಿಳಿದುಬಂದಿಲ್ಲ.‌ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ‌‌ ನಡೆಯುತ್ತಿದೆ.

https://suddikanaja.com/2022/10/10/forensic-science-laboratory-center-will-start-soon-in-shivamogga/

Leave a Reply

Your email address will not be published. Required fields are marked *

error: Content is protected !!