Chain link fraud | ಹಣ ಹೂಡಿಕೆಗೂ ಮುನ್ನ ಹುಷಾರ್, ಶಿವಮೊಗ್ಗ ಸೇರಿ ರಾಜ್ಯದಾದ್ಯಂತ ಚೈನ್ ಲಿಂಕ್ ಹೆಸರಿನಲ್ಲಿ ದೋಖಾ!

police

 

 

HIGHLIGHTS

  • ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ಮೋಸ‌, ದೂರಿನಿಂದ‌ ಹೊರಬಿತ್ತು ಅತ್ಯಂತ ವ್ಯವಸ್ಥಿತ ಜಾಲ
  • ಕಂಪನಿಗೆ ನಾಲ್ವರನ್ನು‌ ಸೇರಿಸಿದರೆ ಪರ್ಸೆಂಟೇಜ್ ಕೊಡುವುದಾಗಿ ನಂಬಿಸಿ ಮೋಸ
  • ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ಕಂಪನಿಯ ಬ್ರಾಂಚ್‌’ಗಳಿದ್ದು ಖಚಿತ ಪಡಿಸಿಕೊಳ್ಳಬೇಕಿದೆ
  • ಆರೋಪಿ ಕಂಪನಿಯ ಖಾತೆಯಲ್ಲಿದ್ದ 1.84 ಕೋಟಿ‌ ಹಣ ಮುಟ್ಟುಗೋಲು ಮಾಡಿಕೊಂಡ ಪೊಲೀಸ್

ಸುದ್ದಿ ಕಣಜ.ಕಾಂ | DISTRICT | 11 OCT 2022
ಶಿವಮೊಗ್ಗ(Shivamogga): ಚೈನ್ ಲಿಂಕ್ ಮಾರ್ಕೆಟಿಂಗ್ ಹೆಸರಿನಲ್ಲಿ ಜನರಿಂದ‌ ಹಣ ಪಡೆದು ಮೋಸ (fraud) ಮಾಡಿರುವ ಘಟನೆ ಬೆಳಕಿಗೆ‌ ಬಂದಿದೆ. ಮೋಸ ಮಾಡಿದೆ ಎನ್ನಲಾದ ಕಂಪನಿ(company)ಯ ಖಾತೆಯಿಂದ ಕೋಟ್ಯಂತರ ಹಣ ವಶಕ್ಕೆ ಪಡೆಯಲಾಗಿದೆ.
ಉದ್ಯೋಗ ನೀಡುವುದಾಗಿ ನಂಬಿಸಿ‌ ಅವರಿಂದ ಹಣ ಪಡೆದು ನಂತರ ಅವರು ಕಂಪನಿಯ ಉತ್ಪನ್ನಗಳನ್ನು ಬಳಸಿದರೆ ಅದರ ಪರ್ಸೆಂಟೇಜ್ ಕೊಡುವುದಾಗಿ‌ ಹೇಳಲಾಗುತ್ತಿತ್ತು. ಇದೇ‌ ರೀತಿಯಲ್ಲಿ ನೂರಾರು ಜನರಿಗೆ ವಂಚನೆ ಮಾಡಲಾಗಿದೆ.

READ | ಬೊಮ್ಮನಕಟ್ಟೆಯಲ್ಲಿ ನಿವೇಶನ ಕಳೆದುಕೊಳ್ಳುವ ಭೀತಿಯಲ್ಲಿರುವವರಿಗೆ ಶುಭ ಸುದ್ದಿ

ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು, ಆರೋಪಿಸಿದ್ದೇನು?
ಅಕ್ಟೋಬರ್ 3ರಂದು ಸಾಗರ ತಾಲೂಕಿನ‌ ಮರಸ ಗ್ರಾಮದ ನಿವಾಸಿ ಎಚ್.ದೇವರಾಜ್(38) ಅವರಿಗೆ ನಗರದ ಸಾವರ್ ಲೈನ್ ಮುಖ್ಯ ರಸ್ತೆಯಲ್ಲಿರುವ ಕಂಪನಿಯವರು ಕೆಲಸ ಕೊಡಿಸುವುದಾಗಿ ಹೇಳಿ ₹35,480 ಹಣ ಕಟ್ಟಿಸಿಕೊಂಡು ಕೆಲಸವನ್ನು ಕೊಡದೆ ತರಬೇತಿ ನೀಡಿ ಕಂಪನಿಯ ಬಟ್ಟೆಗಳನ್ನು ನೀಡಿ ಮಾರಾಟ ಮಾಡಿ ಸಂಸ್ಥೆಗೆ 4 ಜನ ಸೇರಿಸಿದರೆ ಪರ್ಸಂಟೇಜ್ ಹಣ ಕೊಡಲಾಗುವುದು ಎಂದು ನಂಬಿಸಲಾಗಿತ್ತು. ಈ ಬಗ್ಗೆ ದೂರುದಾರರು ಇದು ಚೈನ್ ಲಿಂಕ್ ಮಾರ್ಕೆಟಿಂಗ್ ಆಗಿರುವುದರಿಂದ ಹಣವನ್ನು ಹಿಂದಿರುಗಿಸಲು ಕೇಳಿದರೂ ಕೂಡ, ಹಣವನ್ನು ಹಿಂದಿರುಗಿಸಿರುವುದಿಲ್ಲ.
ಸಾವಿರಾರು ಜನರಿಗೆ ಮೋಸ ಶಂಕೆ
ನಗರದಲ್ಲಿ ನೂರಾರು ಸಾರ್ವಜನಿಕರಿಗೆ ಕೆಲಸ ಕೊಡಿಸುವುದಾಗಿ ಭರವಸೆ‌ ನೀಡುವ ಮೂಲಕ ಉತ್ಪನ್ನ ಮಾರಾಟಕ್ಕೆ ಸೂಚಿಸಲಾಗಿತ್ತು. ನಂತರ ಸಂಸ್ಥೆಗೆ ಜನರನ್ನು ಸೇರಿಸಲು ಹೇಳಿ ಹಣ ಕಟ್ಟಿಸಿಕೊಂಡು ಮೋಸ ಮಾಡುತ್ತಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ (doddapete) ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 420 ಸಹಿತ 34 ಮತ್ತು ಬಡ್ಸ್ ಆಕ್ಟ್ (Banning of Unregulated Deposit Schemes) ಕಲಂ 21, 22, 23 ಅನ್ವಯ ಪ್ರಕರಣ ದಾಖಲಿಸಲಾಗಿದೆ.

READ | ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಮತ್ತೊಮ್ಮೆ ಕುವೆಂಪು ವಿವಿ ಪ್ರಾಧ್ಯಾಪಕರು

ಪೊಲೀಸರಿಂದ ಕೋಟ್ಯಂತರ ಹಣ ಮುಟ್ಟುಗೋಲು
ಸದರಿ ಪ್ರಕರಣದಲ್ಲಿ ಪಿಐ ದೊಡ್ಡಪೇಟೆ ಪೊಲೀಸ್‌ ಠಾಣೆ ಮತ್ತು ಸಿಬ್ಬಂದಿಯ ತಂಡವು ತನಿಖೆ ಕೈಗೊಂಡಿದ್ದು, ಆರೋಪಿ ಕಂಪನಿಯು ಇದೇ ರೀತಿ ಇನ್ನೂ ಸಾವಿರಾರು ಜನರಿಂದ ಹಣವನ್ನು ತೊಡಗಿಸಿಕೊಂಡಿರುವು ಕಂಡು ಬಂದಿರುತ್ತದೆ. ಇದುವರೆಗೆ ಖಾತೆಯಲ್ಲಿದ್ದ ₹1,84,89,989 ಹಣವನ್ನು ಮುಟ್ಟುಗೋಲು ಹಾಕಿ ಕೊಂಡಿರುತ್ತದೆ.
ಕಂಪನಿಯಲ್ಲಿದ್ದ ದಾಖಲೆ, ಉತ್ಪನ್ನಗಳು ಸೀಜ್
ಮಂಗಳವಾರ ನಗರದ ಸಾವರ್ ಲೈನ್ ಮುಖ್ಯ ರಸ್ತೆಯಲ್ಲಿರುವ ಕಂಪನಿಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಕಂಪನಿಯಲ್ಲಿದ್ದ ದಾಖಲೆ ಮತ್ತು ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕಂಪನಿಯು ರಾಜ್ಯದ ಧಾರವಾಡ(dharawad), ದಾವಣಗೆರೆ(davanagere), ಹುಬ್ಬಳ್ಳಿ(hubballi), ಗೋಕಾಕ್(gokak), ಚಿತ್ರದುರ್ಗ (chitradurga) ಇನ್ನೂ ಮುಂತಾದ ಕಡೆಗಳಲ್ಲಿ ಸಹ ಇದೇ ರೀತಿಯಾದ ಬ್ರಾಂಚ್‌(branch)ಗಳಿದ್ದು ಖಚಿತ ಪಡಿಸಿಕೊಳ್ಳಬೇಕಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

https://suddikanaja.com/2022/03/24/chain-snatching-at-brahmana-manchale-village-at-sagar-taluk-teacher-injured/

 

Leave a Reply

Your email address will not be published. Required fields are marked *

error: Content is protected !!