Hakkipikki camp | ಖಾಕಿ ಸರ್ಪಗಾವಲಲ್ಲಿ ಆಪರೇಷನ್ ಬುಲ್ಡೋಜರ್, `ಹಕ್ಕಿಪಿಕ್ಕಿ ಕ್ಯಾಂಪ್’ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ

Hakkipikki

 

 

HIGHLIGHTS

  • ಹಕ್ಕಿಪಿಕ್ಕಿ ಕ್ಯಾಂಪಿನಲ್ಲಿವೆ 128ಕ್ಕೂ ಹೆಚ್ಚು ಮನೆಗಳು, ಈ ಮನೆಗಳಿಗೆ ವಿದ್ಯುತ್, ನೀರಿನ ಸಂಪರ್ಕವೂ ಇದೆ
  • ಏಕಾಏಕಿ ಮನೆಗಳ ತೆರವಿಗೆ ಬಂದಿರುವುದಕ್ಕೆ ಸ್ಥಳೀಯರಿಂದ ಆಕ್ರೋಶ, ಆತ್ಮಹತ್ಯೆಗೆ ಯತ್ನ
  • 200ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲಿನಲ್ಲಿ ನೀರಾವರಿ ಇಲಾಖೆಯಿಂದ ಬುಲ್ಡೋಜರ್ ಸದ್ದು

ಸುದ್ದಿ ಕಣಜ.ಕಾಂ | SHIMOGA CITY | 17 OCT 2022
ಶಿವಮೊಗ್ಗ(shivamogga): ಮಲ್ಲಿಗೇನಹಳ್ಳಿ (malligenahalli) ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿ(ambedkar colony)ಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಬುಲ್ಡೋಜರ್ ಸದ್ದು ಮಾಡಿದೆ. ಮನೆಗಳನ್ನು ತೆರವುಗೊಳಿಸುತ್ತಿದ್ದಾರೆ ಎಂಬ ಕಾರಣಕ್ಕೆ ಹಕ್ಕಿಪಿಕ್ಕಿ ಕ್ಯಾಂಪ್  (hakkipikki camp) ನಿವಾಸಿಯೊಬ್ಬರು ಇಂಧನ ಸುರಿದುಕೊಂಡು, ವಿಷ ಸೇವಿಸಿ ಆತ್ಮಹತ್ಯೆ(suicide)ಗೆ ಯತ್ನಿಸಿದ ಘಟನೆ ನಡೆದಿದೆ.
ಮಲ್ಲಿಗೇನಹಳ್ಳಿ ಹಕ್ಕಿಪಿಕ್ಕಿ ಕ್ಯಾಂಪ್’ನಲ್ಲಿ 128ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ. ಇದು ತುಂಗಾ ಮೇಲ್ದಂಡೆ ಯೋಜನೆಯ ಬಫರ್ ಜೋನ್ ಆಗಿದ್ದು, ಇಲ್ಲಿ 4.75 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳ ಪ್ರಕಾರ ಇಲ್ಲಿ ವಾಸವಾಗಿರುವವರಿಗೆ ಹಲವು ಸಲ ನೋಟಿಸ್ ಕೂಡ ನೀಡಲಾಗಿದೆ. ಆದರೂ ಮನೆಗಳನ್ನು ಖಾಲಿ ಮಾಡದೇ ಇರುವುದರಿಂದ ನೀರಾವರಿ ಇಲಾಖೆಯಿಂದ ಪೊಲೀಸರ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

READ | ಐಟಿಐ ತೇಗರ್ಡೆಯಾದವರಿಗೆ ಉದ್ಯೋಗ ಅವಕಾಶ, ಶಿವಮೊಗ್ಗದಲ್ಲಿ ಇಂಟರ್ ವ್ಯೂ

ಹಕ್ಕಿಪಿಕ್ಕಿ ಜನರ ಆಕ್ರಂದನ
ಇಲ್ಲಿ ವಾಸವಾಗಿರುವ ಮನೆಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸಲಾಗಿದೆ. ಏಕಾಏಕಿ ಬಂದ ಮನೆಗಳನ್ನು ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರು ಮನೆಗಳನ್ನು ತೆರವುಗೊಳಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಇದರ ನಡುವೆಯೂ ಖಾಲಿ ಇದ್ದ ಸುಮಾರು 5-6 ಮನೆಗಳನ್ನು ತೆರವುಗೊಳಿಸಲಾಗಿದೆ. ಜನರು ಗೋಡೆಗಳನ್ನು ಬೀಳಿಸುವಾಗ ಬುಲ್ಡೋಜರ್ ಮುಂದೆ ಮಲಗಿದ ಘಟನೆಯೂ ನಡೆಯಿತು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 200ಕ್ಕೂ ಹೆಚ್ಚು ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

https://suddikanaja.com/2022/10/16/video-of-an-altercation-between-kargal-psi-and-kpcl-security-personnel-of-sagar-taluk-has-gone-viral/

Leave a Reply

Your email address will not be published. Required fields are marked *

error: Content is protected !!