Smart city helpline| ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಬಗ್ಗೆ ದೂರು ನೀಡಬೇಕೇ? ಈ ಸಹಾಯವಾಣಿಗೆ ಕರೆ ಮಾಡಿ

Shivamogga smart city logo

 

 

ಸುದ್ದಿ ಕಣಜ.ಕಾಂ | SHIMOGA CITY | 25 OCT 2022
ಶಿವಮೊಗ್ಗ: ಸ್ಮಾರ್ಟ್‌ ಸಿಟಿ ಕಾಮಗಾರಿಗಳಲ್ಲಿ ಲೋಪಗಳು ಕಂಡುಬಂದರೆ ಯಾರ ಗಮನಕ್ಕೆ ತರಬೇಕು? ಈ ಗೊಂದಲಕ್ಕೆ ಶಿವಮೊಗ್ಗ ಸ್ಮಾರ್ಟ್‌ ಸಿಟಿ ಲಿಮಿಟೆಡ್ (shimoga smart city ltd) ವತಿಯಿಂದ ಸಹಾಯವಾಣಿ (Helpline) ಆರಂಭಿಸಲಾಗಿದೆ. ಯಾವುದೇ ದೂರುಗಳಿದ್ದರೂ ಸಂಬಂಧಪಟ್ಟವರ ಗಮನಕ್ಕೆ ತರಬಹುದು.

READ | ಹಿಂದೂ ಹರ್ಷನ ಮನೆಯ ಮುಂದೆ ದುಷ್ಕರ್ಮಿಗಳಿಂದ ಕೂಗಾಟ, ಹಲ್ಲೆಗೆ ಒಳಗಾದ ವ್ಯಕ್ತಿ ಹೇಳುವುದೇನು?

ಸ್ಮಾರ್ಟ್‌ ಸಿಟಿ ಯೋಜನೆಯ ಉದ್ದೇಶ?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಶಿವಮೊಗ್ಗ ನಗರವು 2ನೇ ಹಂತದಲ್ಲಿ ಆಯ್ಕೆಗೊಂಡಿದ್ದು, ಹಸಿರು ನಗರೀಕರಣದ ಮೂಲಕ ಶಿವಮೊಗ್ಗವನ್ನು ಪರಿಸರ ಪ್ರವಾಸೋದ್ಯಮ (eco tourism) ತಾಣವಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ. ಸಾರ್ವಜನಿಕರಿಗೆ ಮೂಲಸೌಲಭ್ಯವನ್ನು ಒದಗಿಸಿ ಭವಿಷ್ಯದ ಉತ್ತಮ ವಾಸಯೋಗ್ಯ ಮತ್ತು ಅತಿ ಸುಂದರ ನಗರವನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಹಮ್ಮಿಕೊಂಡಿದೆ.
ಈ ಕಾಮಗಾರಿಗಳನ್ನು ದೋಷರಹಿತವಾಗಿ ನಿರ್ವಹಿಸಲು ಎಲ್ಲಾ ಕ್ರಮಗಳನ್ನು ವಹಿಸಲಾಗುತ್ತಿದೆ. ಆದರೂ ಸಣ್ಣಪುಟ್ಟ ದೋಷಗಳನ್ನು ಕಂಡುಬಂದಲ್ಲಿ ಮೆಸ್ಕಾಂ ಇಲಾಖೆ ಅಧಿಕಾರಿಗಳನ್ನಾಗಲಿ ಅಥವಾ ಸ್ಮಾರ್ಟ್‌ ಸಿಟಿ ಅಧಿಕಾರಿಗಳನ್ನಾಗಲಿ ಸಾರ್ವಜನಿಕರು ಕೂಡಲೇ ಇಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಶಿವಮೊಗ್ಗ ಸ್ಮಾರ್ಟ್‌ ಸಿಟಿ ಲಿ. ಉಪ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ | ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ, ಪೊಲೀಸರೇನು ಹೇಳ್ತಾರೆ?

ಸಹಾಯವಾಣಿ ಸಂಖ್ಯೆಗಳು

  • ಮೆಸ್ಕಾಂ- ವೀರೇಂದ್ರ 9448289446
  • ಮೆಸ್ಕಾಂ- ಸುರೇಶ್ 9448289448
  • ಮೆಸ್ಕಾಂ- ಹೇಮ್ಲಾ ನಾಯ್ಕ್ 9448289449
  • ಮೆಸ್ಕಾಂ- ರವೀಂದ್ರ 9480841339
  • ಸ್ಮಾರ್ಟ್‌ ಸಿಟಿ- ಸಚಿನ್ 8317420012
  • ಸ್ಮಾರ್ಟ್‌ ಸಿಟಿ- ಬ್ರಿಜಿಟ್ ವರ್ಗೀಸ್ 6361031995

https://suddikanaja.com/2022/10/25/whatsapp-started-working-after-two-hours-outage-at-world-wide/

Leave a Reply

Your email address will not be published. Required fields are marked *

error: Content is protected !!