Arrest | ಭರ್ಮಪ್ಪ ನಗರದಲ್ಲಿ ಯುವಕನ ಮೇಲೆ ಅಟ್ಯಾಕ್ ಮಾಡಿದ ಮೂವರ ಬಂಧನ, ಮೂವರದ್ದೂ ಕ್ರಿಮಿನಲ್ ಬ್ಯಾಗ್ರೌಂಡ್

arrest bharamapura

 

 

HIGHLIGHTS

  • ಸೀಗೆಹಟ್ಟಿ, ಭರ್ಮಪ್ಪ ನಗರದಲ್ಲಿ ಅವಾಚ್ಯವಾಗಿ ಬೈಯ್ದಿದ್ದ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ ಪೊಲೀಸರು, ಇನ್ನಿಬ್ಬರ ಹುಡುಕಾಟ
  • ಹಳೆಯ ವೈಷಮ್ಯ ಹಿನ್ನೆಲೆ ಸೀಗೆಹಟ್ಟಿಯಲ್ಲಿ ಪ್ರವೀಣ್’ಗೆ ಅವಾಚ್ಯವಾಗಿ ಬೈಯ್ದು ಅಲ್ಲಿಂದ ಭರ್ಮಪ್ಪನಗರಕ್ಕೆ ಹೋದ ದುಷ್ಕರ್ಮಿಗಳು
  • ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲು

ಸುದ್ದಿ ಕಣಜ.ಕಾಂ | SHIMOGA CITY | 25 OCT 2022
ಶಿವಮೊಗ್ಗ: ಸೀಗೆಹಟ್ಟಿ (Seegehatti) ಹಾಗೂ ಭರ್ಮಪ್ಪ ನಗರ(Bharmappa nagar)ದಲ್ಲಿ ಸೋಮವಾರ ರಾತ್ರಿ ನಡೆದ ಘಟನೆ ಸಂಬಂಧ ಮೂವರನ್ನು ಬಂಧಿಸಿದ್ದು, ಇನ್ನಿಬ್ಬರ ಹುಡುಕಾಟ ನಡೆದಿದೆ.

READ | ಹಿಂದೂ ಹರ್ಷನ ಮನೆಯ ಮುಂದೆ ದುಷ್ಕರ್ಮಿಗಳಿಂದ ಕೂಗಾಟ, ಹಲ್ಲೆಗೆ ಒಳಗಾದ ವ್ಯಕ್ತಿ ಹೇಳುವುದೇನು?

ಕ್ಲಾರ್ಕ್ ಪೇಟೆ ನಿವಾಸಿಯ ಮಾರ್ಕೆಟ್ ಫೌಜಾನ್(22), ಅಜರ್ ಅಲಿಯಾಸ್ ಅಜ್ಜು(24) ಹಾಗೂ‌ ಫರಾಜ್ (21) ಎಂಬುವವರನ್ನು ಬಂಧಿಸಲಾಗಿದೆ. ಇದರಲ್ಲಿ ಫೌಜಾನ್ ವಿರುದ್ಧ ಈ ಹಿಂದೆ 5 ಪ್ರಕರಣಗಳು, ಅಜ್ಜು ವಿರುದ್ಧ ಮೂರು, ಫರಾಜ್ ಮೇಲೆ ಈ ಹಿಂದೆ 4 ಪ್ರಕರಣಗಳು ದಾಖಲಾಗಿವೆ.
ಹಳೆಯ ವೈಷಮ್ಯ ಹಿನ್ನೆಲೆ ಗಲಾಟೆ
ಸೀಗೆಹಟ್ಟಿಯ ನಿವಾಸಿ ಪ್ರವೀಣ್ ಅಲಿಯಾಸ್ ಕುಲ್ಡಾ ಪ್ರವೀಣ್ ಎಂಬಾತ ಫೌಜಾನ್’ಗೆ ಅವಾಚ್ಯವಾಗಿ ಬೈಯ್ದಿದ್ದನು. ಇದರ ಪ್ರತೀಕಾರವಾಗಿ ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಸೀಗೆಹಟ್ಟಿಯಲ್ಲಿ ಪ್ರವೀಣ್’ಗೆ ಅವಾಚ್ಯವಾಗಿ ಬೈಯ್ದಿದ್ದಾರೆ. ಈ ವೇಳೆ ಒಟ್ಟು ಐದು ಜನರು ಎರಡು ಬೈಕ್’ಗಳ ಮೇಲೆ ಬಂದಿದ್ದರು. ಸೀಗೆಹಟ್ಟಿಯಲ್ಲಿ ಬೈಯ್ದು ಇಬ್ಬರನ್ನು ಕ್ಲಾರ್ಕ್ ಪೇಟೆಗೆ ಬಿಟ್ಟು ಮೂವರು ಎರಡು ಬೈಕ್’ಗಳಲ್ಲಿ‌ ಧರ್ಮಪ್ಪನಗರದ ಮೂಲಕ ಸಾಗಿ ಹೋಗುವಾಗ ಪ್ರಕಾಶ್ ಎದುರಾಗಿದ್ದು, ಅವನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

https://suddikanaja.com/2022/10/24/fir-against-hindu-harshas-sister-ashivani-and-other-15-at-doddapete-police-station/

Leave a Reply

Your email address will not be published. Required fields are marked *

error: Content is protected !!