HIGHLIGHTS
ದೀಪಾವಳಿ ಹಬ್ಬದ ಹಿನ್ನೆಲೆ ಶಿವಮೊಗ್ಗ-ಯಶವಂತಪುರ- ಶಿವಮೊಗ್ಗಕ್ಕೆ ರೈಲು ಸಂಚಾರ
ಹಬ್ಬದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುವುದರಿಂದ ಅನಾನುಕೂಲ ತಡೆಗೆ ರೈಲು ಸೇವೆ
ಪ್ರಯಾಣಿಕರು ರೈಲಿನ ಪ್ರಯೋಜನ ಪಡೆದುಕೊಳ್ಳುವಂತೆ ನೈರುತ್ಯ ರೈಲ್ವೆ ಇಲಾಖೆ ಮನವಿ
ಸುದ್ದಿ ಕಣಜ.ಕಾಂ | KARNATAKA | 25 OCT 2022
ಶಿವಮೊಗ್ಗ: ದೀಪಾವಳಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 27ರಂದು ಶಿವಮೊಗ್ಗ- ಯಶವಂತಪುರ- ಶಿವಮೊಗ್ಗ ನಡುವೆ ರೈಲು ಸಂಚಾರಕ್ಕೆ ನೈರುತ್ಯ ರೈಲ್ವೆ ಇಲಾಖೆ ಆದೇಶಿಸಿದೆ.
READ | ಹಿಂದೂ ಹರ್ಷನ ಮನೆಯ ಮುಂದೆ ದುಷ್ಕರ್ಮಿಗಳಿಂದ ಕೂಗಾಟ, ಹಲ್ಲೆಗೆ ಒಳಗಾದ ವ್ಯಕ್ತಿ ಹೇಳುವುದೇನು?
ರೈಲಿನ ವೇಳಾಪಟ್ಟಿ
ರೈಲು ಸಂಖ್ಯೆ 06205 ಶಿವಮೊಗ್ಗದಿಂದ ಬೆಳಗ್ಗೆ 9 ಗಂಟೆಗೆ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 06206 ಯಶವಂತಪುರದಿಂದ ಸಂಜೆ 4 ಗಂಟೆಗೆ ಹೊರಟು ರಾತ್ರಿ 9.15ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ.
ಒಟ್ಟು 16 ಬೋಗಿಗಳು
ಈ ರೈಲಿನಲ್ಲಿ 2 ಜಿಎಸ್.ಎಲ್.ಆರ್, 4 ಜಿಎಸ್, 8 ಜಿಎಸ್.ಸಿಎನ್, 1 ಎಸಿಸಿಎನ್, 1 ಎಫ್.ಸಿ.ಡಬ್ಲ್ಯುಎಸಿ ಸೇರಿ ಒಟ್ಟು 16 ಬೋಗಿಗಳು ಇರಲಿವೆ.
https://suddikanaja.com/2022/10/19/special-train-from-shivamogga-and-states-other-places-in-deepawali-festival-season/