Bhadravathi | ಭದ್ರಾವತಿಯಲ್ಲಿ ದರೋಡೆ ಗ್ಯಾಂಗ್ ಅರೆಸ್ಟ್, ಸಿಬ್ಬಂದಿ ಕಾರ್ಯಕ್ಕೆ ಭೇಷ್ ಎಂದ ಎಸ್ಪಿ

Bdvt arrest

 

 

HIGHLIGHTS

  • ದೀಪಾವಳಿ ದಿನವೇ ಭದ್ರಾವತಿ ಗ್ರಾಮಾಂತರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
  • ದರೋಡೆ ಆರೋಪದಲ್ಲಿ ಭದ್ರಾವತಿಯ ಇಬ್ಬರು, ಬೆಂಗಳೂರಿನ ಒಬ್ಬ ಸೇರಿ ಮೂವರ ಬಂಧನ
  • ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್

ಸುದ್ದಿ ಕಣಜ.ಕಾಂ | TALUK | 26 OCT 2022
ಭದ್ರಾವತಿ(Bhhadravathi): ಭದ್ರಾವತಿ ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ದರೋಡೆ ಗ್ಯಾಂಗ್ ಅನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ. ಸಿಬ್ಬಂದಿಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (GK Mithun kumar) ಅವರು ಶ್ಲಾಘಿಸಿದ್ದಾರೆ.

READ | ದೀಪಾವಳಿ ಹಿನ್ನೆಲೆ ಶಿವಮೊಗ್ಗ-ಯಶವಂತಪುರ ನಡುವೆ ಹೊಸ ರೈಲು ಸಂಚಾರ, ವೇಳಾಪಟ್ಟಿ ಇಲ್ಲಿದೆ

ಬಂಧಿತರ ಡಿಟೇಲ್ಸ್ ಇಲ್ಲಿದೆ
ಭದ್ರಾವತಿಯ ತಾರಿಕಟ್ಟೆ  (Tarikatte) ಗ್ರಾಮದ ಸತ್ಯಾನಂದ ಅಲಿಯಾಸ್ ಸ್ನೇಕ್ ಸತ್ಯ(22), ಮೂಲೆಕಟ್ಟೆ ಗ್ರಾಮದ ಟಿ.ಬಾಬು ಅಲಿಯಾಸ್ ಜೋಶ್ವಾ(19), ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಸಮೀಪದ ವೆಂಕಟೇಶ್ ಅಲಿಯಾಸ್ ಖರಾಬ್ ಬೆಳ್ಳಿ(22) ಬಂಧಿತರು.
ಆರೋಪಿಗಳ ಬಳಿ ಸಿಕ್ಕಿದ್ದೇನು?
ಆರೋಪಿತರಿಂದ ಭದ್ರಾವತಿ ಗ್ರಾಮಾಂತರ ಠಾಣೆಯ 2 ಮತ್ತು ಪೇಪರ್ ಟೌನ್ ಠಾಣೆಯ 1 ಸುಲಿಗೆ ಪ್ರಕರಣ, ಭದ್ರಾವತಿ ಗ್ರಾಮಾಂತರ ಠಾಣೆಯ 1 ಸ್ವತ್ತು ಕಳವು ಪ್ರಕರಣ ಸೇರಿ ಒಟ್ಟು 4 ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 1,75,000 ರೂಪಾಯಿ ಮೌಲ್ಯದ 36 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 30,000 ರೂ. ಮೌಲ್ಯದ 2 ಮೊಬೈಲ್ ಫೋನ್’ಗಳು ಕೃತ್ಯಕ್ಕೆ ಬಳಸಿದ್ದ 1.60 ಲಕ್ಷ ರೂ. ಮೌಲ್ಯದ 2 ಬೈಕ್ ಗಳು ಹಾಗೂ ಒಂದು ಡ್ರ್ಯಾಗರ್ ಚಾಕು (dragon knife) ಸೇರಿ ಒಟ್ಟು 3,65,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಕಾರ್ಯಾಚರಣೆ
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಸುಲಿಗೆ ಮತ್ತು ಕನ್ನ ಕಳವು ಪ್ರಕರಣಗಳಲ್ಲಿ ಆರೋಪಿತರು ಹಾಗೂ ಕಳವು ಸಾಮಗ್ರಿಗಳ ಪತ್ತೆಗಾಗಿ ಭದ್ರಾವತಿ ಗ್ರಾಮಾಂತರ ಠಾಣೆ ಪಿಐ, ಪಿಎಸ್‍ಐ ಮತ್ತು ಸಿಬ್ಬಂದಿಯ ತಂಡ ನೇಮಕ ಮಾಡಲಾಗಿತ್ತು. ಕಾರ್ಯಾಚರಣೆ ಕೈಗೊಂಡ ತಂಡವು ಮಂಗಳವಾರ ಆರೋಪಿಗಳನ್ನು ಬಂಧಿಸಿದ್ದಾರೆ.

https://suddikanaja.com/2022/10/25/hindu-harsha-sister-reaction-to-media-at-shimoga/

Leave a Reply

Your email address will not be published. Required fields are marked *

error: Content is protected !!