Arecanut Leaf spot disease | ಅಡಿಕೆಯ ಎಲೆಚುಕ್ಕೆಗೆ ವಾರದಲ್ಲಿ ಸೂಕ್ತ ಸಲಹೆ ನೀಡದಿದ್ದರೆ ತೀರ್ಥಹಳ್ಳಿ ತೋಟಗಾರಿಕೆ‌ ಕಚೇರಿಗೆ ಮುತ್ತಿಗೆ

RM Manjunath gowda

 

 

ಸುದ್ದಿ ಕಣಜ.ಕಾಂ | DISTRICT | 31 OCT 2022
ತೀರ್ಥಹಳ್ಳಿ(Thirthahalli): ಅಡಿಕೆ(arecanut)ಯ ಎಲೆಚುಕ್ಕೆ ರೋಗದ ಬಗ್ಗೆ ವಾರದಲ್ಲಿ ಸೂಕ್ತ ಸಲಹೆಯೊಂದಿಗೆ ಸರ್ಕಾರ ಸಮಸ್ಯೆಯನ್ನು ಬಗೆಹರಿಸದಿದ್ದರೆ ತೀರ್ಥಹಳ್ಳಿ ತೋಟಗಾರಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಸಹಕಾರಿ ವಿಭಾಗದ ಮುಖಂಡ ಡಾ.ಆರ್.ಎಂ.ಮಂಜುನಾಥಗೌಡ ಹೇಳಿದರು.

READ | ಶಿವಮೊಗ್ಗದ ಹಲವೆಡೆ ಮತ್ತೆ ಕಾಡಾನೆ ದಾಳಿ, ಬಾಳೆ, ಅಡಿಕೆ ತೋಟಕ್ಕೆ ನುಗ್ಗಿದ ಪುಂಡಾನೆ

ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬಲ್‌ ಎಂಜಿನ್‌ ಸರ್ಕಾರಕ್ಕೆ ರೈತರ ಸಮಸ್ಯೆಗಳ ಬಗ್ಗೆ ಕಾಳಜಿಯೇ ಇಲ್ಲ. ಇದು ಸುಳ್ಳಿನ ಸಾಮ್ರಾಜ್ಯವನ್ನೇ ಕಟ್ಟುತ್ತಿವೆ ಎಂದು ಆರೋಪಿಸಿದರು.

ರೈತರ ಬಗ್ಗೆ ಕಾಳಜಿ ಇರುವ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಬೇಕಾಗಿದೆ. ಮಲೆನಾಡಿನ ಹಲವು ಸಮಸ್ಯೆಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿದ್ದು ವಿಶೇಷ ತಜ್ಞರ ಸಮಿತಿ ರಚಿಸಿ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದಾರೆ.
| ಆರ್.ಎಂ.ಮಂಜುನಾಥ್ ಗೌಡ, ರಾಜ್ಯ ಕಾಂಗ್ರೆಸ್ ಸಹಕಾರಿ ವಿಭಾಗದ ಮುಖಂಡ

ತಾಲೂಕಿನಾದ್ಯಂತ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಡಿಕೆಗೆ ತಗುಲಿದ ಎಲೆಚುಕ್ಕೆ ರೋಗದಿಂದ ಬೆಳೆಗಾರರು ಕಂಗಲಾಗಿದ್ದು, ಆಯ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳಿಗೆ ಯಾವ ಔಷಧಿ ನೀಡಬೇಕೆಂಬ ಮಾಹಿತಿ ಇಲ್ಲ ಎಂದು ಆಪಾದಿಸಿದರು.
ಎಲೆಚುಕ್ಕೆ ರೋಗದೊಂದಿಗೆ ಕಸ್ತೂರಿ ರಂಗನ್ ವರದಿ, ಬಗರ್ ಹುಕುಂ ಸಾಗುವಳಿ, ಅರಣ್ಯ ಹಕ್ಕು ಕಾಯ್ದೆ ಇತ್ಯಾದಿ ಸವಾಲುಗಳಿವೆ.‌ ಮಲೆನಾಡು ಪ್ರದೇಶದ ಜನಪ್ರತಿನಿಧಿಗಳು ಇದರೆಡೆಗೆ ನೈಜ ಕಾಳಜಿ ತೋರುತ್ತಿಲ್ಲ‌ ಎಂದರು.

READ | ಶಿವಮೊಗ್ಗದಲ್ಲಿನ ಗಲಾಟೆಗಳಿಗೆ ಕೆ.ಎಸ್.ಈಶ್ವರಪ್ಪನವರೇ ಕಾರಣ

ಒಂದು ಓಟಿಗೆ ₹15,000!
ಶಿವಮೊಗ್ಗ ಗ್ರಾಮಾಂತರ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಮತವೊಂದಕ್ಕೆ ₹15,000 ನೀಡಿ ಶತ ಪ್ರಯತ್ನ ಮಾಡಿದರು. ಮತದಾರರು ನನ್ನ ಕೈಬಿಡಲಿಲ್ಲ. ನನ್ನ ಜೀವಮಾನದಲ್ಲಿ ಇಷ್ಟೊಂದು ಕೆಟ್ಟ ವ್ಯವಸ್ಥೆಯ ಚುನಾವಣೆ ನೋಡಿರಲಿಲ್ಲ ಎಂದು ಆಪಾದಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ, ಮಾಜಿ ಅಧ್ಯಕ್ಷೆ ಶಬನಮ್, ಕಾಂಗ್ರೆಸ್ ಮುಖಂಡರಾದ ಹಾರೋಗುಳಿಗೆ ಪದ್ಮನಾಭ, ತಾರನಾಥ್, ಬಿ.ಪಿ.ರಾಮಚಂದ್ರ, ಯಲ್ಲಪ್ಪ, ಹೊರಬಯಲು ರಾಮಕೃಷ್ಣ, ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

https://suddikanaja.com/2022/10/30/rajyotsava-award-2022-two-person-from-shivamogga-secured-award/

Leave a Reply

Your email address will not be published. Required fields are marked *

error: Content is protected !!