Black Magic | ಶಿಕ್ಷಕಿಯ ಮನೆಯ ಮುಂದೆ ವಾಮಾಚಾರ, ಕಾರಣವೇನು?

black magic

 

 

ಸುದ್ದಿ ಕಣಜ.ಕಾಂ | SHIMOGA CITY | 31 OCT 20022
ಶಿವಮೊಗ್ಗ(shivamogga): ಗೋಪಾಳ (Gopal) ಬಡಾವಣೆಯಲ್ಲಿ ಶಿಕ್ಷಕಿ(teacher)ಯ ಮನೆಯ ಮುಂದೆ ವಾಮಾಚಾರ (witchcraft) ನಡೆಸಿರುವ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿ  (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿವಾಹ ವಿಚ್ಛೇದನ(Divorce)ಕ್ಕಾಗಿ ಶಿಕ್ಷಕಿಯ ಪತಿ ಮತ್ತು ಆತನ ಕಡೆಯವರು ವಾಮಾಚಾರ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ. ಶಿಕ್ಷಕಿಯ ಮನೆಯ ಮುಂದೆ ವಾಮಾಚಾರದ ವಸ್ತುಗಳನ್ನು ಇಡಲಾಗಿದೆ.

READ | 1048 ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಕ್ಕೆ ಅಧಿಸೂಚನೆ, ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?

ವಿಚ್ಛೇದನ ನಿರಾಕರಣೆ, ವಾಮಾಚಾರಕ್ಕೆ ಮೊರೆ
ಶಿಕ್ಷಕಿಗೆ ವಿವಾಹ ವಿಚ್ಛೇದನ ನೀಡುವಂತೆ ಪತಿಯು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ವಿಚ್ಛೇದನ ನೀಡುವುದಕ್ಕೆ ನಿರಾಕರಿಸಿದ್ದರು. ಹೀಗಾಗಿ ಪತಿಯು ಸೆಪ್ಟೆಂಬರ್ 27ರಂದು ಮನೆಯ ಬಾಗಿಲ ಮುಂದೆ ವಾಮಾಚಾರದ ವಸ್ತುಗಳನ್ನು ಇಡಲಾಗಿತ್ತು. ಅಕ್ಟೋಬರ್ 24ರಂದು ಮತ್ತೊಮ್ಮೆ ಇದನ್ನೇ ಪುನರಾವರ್ತಿಸಲಾಗಿದೆ ಎಂದು ಆರೋಪಿಸಲಾಗಿದೆ.
ನಿಂಬೆ ಹಣ್ಣು, ಕುಂಕುಮ ಕೋಳಿ ತಲೆ…
ಅಮಾವಾಸ್ಯೆಯ ದಿನದಂದು ಮನೆಯ ಬಾಗಿಲಿನ ಮುಂಭಾಗದಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳಾದ ನಿಂಬೆ ಹಣ್ಣು, ಕುಂಕುಮ, ಕೋಳಿ ತಲೆ ಮತ್ತು ಕಾಲುಗಳನ್ನು ಇಡಲಾಗಿತ್ತು. ಇದನ್ನು ಕಂಡ ಕುಟುಂಬದವರು ಗಾಬರಿಯಾಗಿದ್ದಾರೆ. ತುಂಗಾನಗರ (tunga nagar) ಠಾಣೆಗೆ ದೂರು ನೀಡಿದ್ದು, ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

https://suddikanaja.com/2022/10/29/world-skill-competition-program-at-shimoga/

Leave a Reply

Your email address will not be published. Required fields are marked *

error: Content is protected !!