Life imprisonment | ರಸ್ತೆ ಬದಿ ನಿಂತಿದ್ದವನ ಬರ್ಬರ ಹತ್ಯೆ, ನಾಲ್ಕು ಜನರಿಗೆ ಜೀವಾವಧಿ ಶಿಕ್ಷೆ

Court Judgment

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಸ್ತೆ ಬದಿ ನಿಂತಿದ್ದ ಅಣ್ಣಾನಗರ ನಿವಾಸಿ ಅಯಾತುಲ್ಲಾ ಹುಮಾಯುನ್ ಅಲಿಯಾಸ್ ಬಚ್ಚಾ(19) ಎಂಬಾತನ ಬರ್ಬರ ಹತ್ಯೆಗೈದ ನಾಲ್ಕು ಜನರಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಇಲಿಯಾಜ್ ನಗರದ ಅರ್ಬಾಜ್(19), ಮಿಳಘಟ್ಟ ನಿವಾಸಿಗಳಾದ ಶಾರೂಕ್ ಖಾನ್(19), ಶಾದಾಬ್(19), ಟ್ಯಾಂಕ್ ಮೊಹಲ್ಲಾದ ಅಲ್ಯಾಜ್ ಆಶು(19) ವಿರುದ್ಧದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಒಂದನೇ ಮತ್ತು ಮೂರನೇ ಅಪರ‌ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್.ಮಾನು ತೀರ್ಪು ನೀಡಿದರು.

READ |  ಗಾಜನೂರು ಡ್ಯಾಂ ಓಪನ್, ಎಷ್ಟು ನೀರು ಹೊರಬಿಡಲಾಗಿದೆ? ಮೈದುಂಬಿ ಹರಿಯುತ್ತಿರುವ ತುಂಗಾ ಹೊಳೆ

ಪ್ರಕರಣದ ಹಿನ್ನೆಲೆ
2017ರಲ್ಲಿ ಮಧ್ಯಾಹ್ನ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾನಗರದ ಮಾತೃಶ್ರೀ ಸ್ಟುಡಿಯೋ ಹತ್ತಿರ ನಿಂತಿದ್ದ ಬಚ್ಚಾನಿಗೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿತ್ತು. ಆರೋಪಿಗಳ ವಿರುದ್ಧ ಬಚ್ಚಾನ ತಾಯಿ ದೂರು ನೀಡಿದ್ದರು. ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿ ದೊಡ್ಡಪೇಟೆ ಪಿಐ ಕೆ.ಟಿ. ಗುರುರಾಜ್ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಠಾಣೆಯ ಸುರೇಶ್, ಉಮೇಶ್ ತನಿಖಾ ಸಹಾಯಕರಾಗಿ ಸರ್ತವ್ಯ ನಿರ್ವಹಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ವಾದ ಮಂಡಿಸಿದ್ದರು.

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

error: Content is protected !!