Alok kumar visit | ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗ ಭೇಟಿ ನಾಳೆ, ಜನರೊಂದಿಗೆ ನಡೆಸಲಿದ್ದಾರೆ ಸಭೆ, ಏನೆಲ್ಲ ದೂರುಗಳನ್ನು ಸಲ್ಲಿಸಬಹುದು?

Alok kumar IPS

 

 

ಸುದ್ದಿ ಕಣಜ.ಕಾಂ | PUBLIC GRIEVANCES 
ಶಿವಮೊಗ್ಗ: ಜಿಲ್ಲೆಗೆ ನವೆಂಬರ್ 3ರಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಭೇಟಿ ನೀಡಲಿದ್ದು, ಸಂಜೆ 4 ಗಂಟೆಗೆ ಸಾರ್ವಜನಿಕರೊಂದಿಗೆ ಸಭೆ ನಡೆಸಲಿದ್ದಾರೆ.

READ | ಶಿವಮೊಗ್ಗದ ಎಲ್ಲ ಆಟೋಗಳಿಗೆ ಇನ್ಮುಂದೆ‌ ಮೀಟರ್ ಕಡ್ಡಾಯ, ಡೆಡ್ ಲೈನ್ ನೀಡಿದ RTO

ಖುದ್ದು ಅಲೋಕ್ ಕುಮಾರ್ ಅವರೇ ಟ್ವೀಟ್ ಮಾಡಿದ್ದು, ಅದರಲ್ಲಿ ನ.3ರಂದು ಶಿವಮೊಗ್ಗ ಹಾಗೂ 2ರಂದಯ ಚಿತ್ರದುರ್ಗಕ್ಕೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಸಂಜೆ 4 ಗಂಟೆಗೆ ಸಾರ್ವಜನಿಕರೊಂದಿಗೆ ಸಭೆ ನಡೆಸಲಿದ್ದು, ಯಾವೆಲ್ಲ ದೂರುಗಳನ್ನು ಸಲ್ಲಿಸಬಹುದು ಎಂಬುವುದನ್ನು ಟ್ವೀಟ್’ನಲ್ಲಿ ತಿಳಿಸಿದ್ದಾರೆ.alok kumarಯಾವೆಲ್ಲವುಗಳ ಬಗ್ಗೆ ಅಹವಾಲು ಸಲ್ಲಿಸಬಹುದು?
ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿಲ್ಲದ್ದರೆ, ಪ್ರಕರಣ ದಾಖಲಿಸಿಕೊಂಡರೂ ಆರೋಪಿಗಳನ್ನು ಬಂಧಿಸದಿದ್ದರೆ, ತನಿಖೆ ಸರಿಯಾದ ದಿಸೆಯಲ್ಲಿ ಸಾಗುತ್ತಿಲ್ಲ ಎನ್ನುವುದಾದರೆ ಹಾಗೂ ಆರೋಪಿಗಳಿಂದ ಯಾವುದೇ ರೀತಿಯ ಕಿರುಕುಳ ಇತ್ಯಾದಿಗಳಿದ್ದಲ್ಲಿ ಸಂಜೆಯ ಸಭೆಯಲ್ಲಿ ದೂರು ಸಲ್ಲಿಸಬಹುದಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಸಾರ್ವಜನಿಕರ ಅಹವಾಲುಗಳನ್ನು ಆಲಿಸಬೇಕು ಎಂದು ತಿಳಿಸಿದ್ದಾರೆ.

error: Content is protected !!