Court news | ಚಾಕು ಚುಚ್ಚಿ ಮಾರಣಾಂತಿಕ ಹಲ್ಲೆ ಮಾಡಿದವನಿಗೆ 4 ವರ್ಷ ಜೈಲು

Shivamogga Court

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
Shivamogga: ಭದ್ರಾವತಿ ತಾಲೂಕಿನ ಕಾಗೇಕೋಡಮಗ್ಗೆ ಗ್ರಾಮದಲ್ಲಿ ವ್ಯಕ್ತಿಯೊಬ್ಬನಿ ಮೇಲೆ ಚಾಕುದಿಂದ ಮಾರಣಾಂತಿಕ ಹಲ್ಲೆ ಮಾಡಿದವನಿಗೆ 4 ವರ್ಷ ಸಾಧಾ ಕಾರಾವಾಸ ಶಿಕ್ಷೆ ಮತ್ತು ₹40,000 ದಂಡ ವಿಧಿಸಿ‌ ನ್ಯಾಯಾಲಯ ಆದೇಶಿಸಿದೆ.
ಕಾಗೇಕೋಡಮಗ್ಗೆ ಗ್ರಾಮದ ನಿವಾಸಿ ಸಯ್ಯದ್ ಮುಸ್ತಾಕ್‌ ಎಂಬಾತನ‌ ಮೇಲೆ ಅದೇ ಗ್ರಾಮದ ಜಮೀಲ್ ಎಂಬುವವ 2018ರ ಸೆಪ್ಟೆಂಬರ್ 16ರಂದು ಹಲ್ಲೆ ಮಾಡಿದ್ದ.

READ| ಇನ್ಮುಂದೆ ಪೊಲೀಸರ ನಿಗಾದಲ್ಲಿರಲಿದೆ ಶಿವಮೊಗ್ಗದ ಪ್ರಮುಖ ಸ್ಥಳಗಳು, ನಾಗರಿಕ ಸುರಕ್ಷತಾ ಕಾಯ್ದೆಗೆ ಡೆಡ್ ಲೈನ್

ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ
ನಾಲ್ಕನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನ ಭದ್ರಾವತಿ(Bhadravathi)ಯಲ್ಲಿ ವಿಚಾರಣೆ ನಡೆಸಿದ ನ್ಯಾಯಧೀಶ ಶಶಿಧರ್ ಅವರು ಜಮೀಲ್ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ತೀರ್ಪು‌ ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು.

error: Content is protected !!