ಸುದ್ದಿ ಕಣಜ.ಕಾಂ
ಶಿವಮೊಗ್ಗ: ಚೆನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳೆಗೂಡು ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಜಿಂಕೆ ಬೇಟೆಯಾಡಿದ ನಾಲ್ವರನ್ನು ಬಂಧಿಸಿದ್ದಾರೆ.
ಇವರಿಂದ ಜಿಂಕೆಯ ಕೊಂಬು, ತಲೆ ಮತ್ತು ಒಣ ಮಾಂಸ ಜಪ್ತಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಜೊಜೊ ಹೆಬಿಚ್ಯುವೆಲ್ ಬೇಟೆಗಾರನಾಗಿದ್ದಾನೆ.
ಕಾರ್ಗಲ್ ಪ್ರಾದೇಶಿಕ ವಲಯ, ಕಾರ್ಗಲ್ ವನ್ಯಜೀವಿ ವಲಯ ಮತ್ತು ಕೋಗಾರ ವನ್ಯಜೀವಿ ವಲಯದಿಂದ ಕಾರ್ಯಾಚರಣೆ ಮಾಡಲಾಗಿದೆ. ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಶ್ರೀಧರ್, ಆರ್‍ಎಫ್‍ಒ ಛಾಯಾ, ರಾಘವೇಂದ್ರ, ಪ್ರೀತಿ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎನ್ನುವುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.