Crime news | ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ, ಬೈಕ್‌ ಸೇರಿ ಮೂವರ ಬಂಧನ

police

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾರ್ವಜನಿಕರಿಗೆ ಗಾಂಜಾ‌ ಮಾರಾಟ‌ (Ganja sale) ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮದಾರಿ ಪಾಳ್ಯದ ಮೊಹಮ್ಮದ್ ಫೀರ್ ಅಲಿಯಾಸ್ ಶಾಹೀದ್(21), ಮತ್ತೂರು ರಸ್ತೆಯ ಯೂಸೂಫ್ ಖಾನ್(20)‌ ಮತ್ತು ಮದರಿ ಪಾಳ್ಯದ ಮೊಹಮ್ಮದ್ ಆಸೀಫ್ ಅಲಿಯಾಸ್ ಮೊಹಮ್ಮದ್ ರಫೀಕ್ ಅಲಿಯಾಸ್ ಅಂಡಾ(21) ಬಂಧಿತರು.

READ | ಅಪ್ರಾಪ್ತ ವಯಸ್ಸಿನ‌ಮಗನಿಗೆ ಓಡಿಸಲು ಬೈಕ್ ನೀಡುವ‌ ಮುನ್ನ ಪೋಷಕರೇ ಹುಷಾರ್! ಇಲ್ಲೊಬ್ಬ ತಂದೆಗೆ‌ ನ್ಯಾಯಾಲಯದಿಂದ ಭಾರೀ ದಂಡ

₹20,000 ಮೌಲ್ಯದ ಗಾಂಜಾ, ಬೈಕ್ ಸೀಜ್
₹20,000 ಮೌಲ್ಯದ 615 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ‌ ವಿರುದ್ಧ NDPS ಕಾಯ್ದೆ ಅಡಿಯಲ್ಲಿ ತುಂಗಾನಗರ ಠಾಣೆ(Tunganagar police station)ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.
ಶಿವಮೊಗ್ಗ ಉಪ ವಿಭಾಗ ಡಿವೈಎಸ್.ಪಿ ನೇತೃತ್ವದಲ್ಲಿ ತುಂಗಾನಗರ ಪಿಎಸ್.ಐ ಮತ್ತು ಸಿಬ್ಬಂದಿ ತಂಡವು ಕಾರ್ಯಾಚರಣೆ ನಡೆಸಿದೆ.

error: Content is protected !!