ಶಿವಮೊಗ್ಗ ನಗರಿಗರಿಗೆ ಪಾಲಿಕೆ ಶಾಕ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಈಗಾಗಲೇ ಕೋವಿಡ್ ಸಂಕಷ್ಟದಿಂದ ಸಹಜ ಸ್ಥಿತಿಗೆ ಸಾರ್ವಜನಿಕ ಬದುಕು ಮರಳುತ್ತಿದೆ. ಏತನ್ಮಧ್ಯೆ ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ 144, ಕಫ್ರ್ಯೂಗಳಿಂದಾಗಿ ವ್ಯಾಪಾರ ವಹಿವಾಟೇ ಬಂದ್ ಆಗಿತ್ತು. ಹೀಗಾಗಿ, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಾನಗರ ಪಾಲಿಕೆ ತೆರಿಗೆ ಏರಿಕೆ ಮಾಡುವ ಮೂಲಕ ಶಾಕ್ ನೀಡಿದೆ.
ಕಳೆದ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಇದಕ್ಕೆ ವಿಪಕ್ಷಗಳು ಭಾರಿ ವಿರೋಧಿಸಿದ್ದವು. ಆದರೂ ಈ ಬಗ್ಗೆ ಪಾಲಿಕೆ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ.

ನಗರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಪಾಲಿಕೆಯ ಸಂಪನ್ಮೂಲ ಕ್ರೋಢೀಕರಣ ದೃಷ್ಟಿಯಿಂದ 2020-21ನೇ ಸಾಲಿಗೆ ಆಸ್ತಿ ತೆರಿಗೆಯ ಮರುಪರಿಷ್ಕರಣೆ ಅವಶ್ಯವಾಗಿರುತ್ತದೆ. ಆದ್ದರಿಂದ ಆಸ್ತಿ ಮಾಲೀಕರು ಪರಿಷ್ಕರಿಸಿದ ಆಸ್ತಿ ತೆರಿಗೆಯನ್ನು ಪಾವತಿಸಿ ನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಹಾಗೂ ಈ ಮೂಲಕ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು.
– ಚಿದಾನಂದ್ ಎಸ್. ವಟಾರೆ, ಆಯುಕ್ತರು, ಶಿವಮೊಗ್ಗ ಮಹಾನಗರ ಪಾಲಿಕೆ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2002ರ ಏಪ್ರಿಲ್‍ನಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಅನುಷ್ಠಾನದಲ್ಲಿದೆ. ಕರ್ನಾಟಕ ಪೌರ ನಿಗಮಗಳ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆಯನ್ನು ಕನಿಷ್ಠ ಶೇ.15ರಿಂದ 30ರ ವರೆಗೆ ಹೆಚ್ಚಿಸುವುದು ಪದ್ಧತಿಯಾಗಿದೆ.

error: Content is protected !!