Shiralakoppa  | ಶಿರಾಳಕೊಪ್ಪದಲ್ಲಿ ನಿಷೇಧಿತ ಸಂಘಟನೆಯ ಗೋಡೆಬರಹ, ಇಲ್ಲಿವರೆಗಿನ ಬೆಳವಣಿಗೆಗಳೇನು?

Shiralakoppa Gode baraha

 

 

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ
SHIRALAKOPPA: ಶಿಕಾರಿಪುರ (Shikaripura) ತಾಲೂಕಿನ ಶಿರಾಳಕೊಪ್ಪ (Shiralakoppa) ಪಟ್ಟಣದ ಹಲವೆಡೆ ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಸಿ.ಎಫ್.ಐ)ಗೆ ಸೇರಿ ಎಂಬ ಗೋಡೆ ಬರಹಗಳು ಬರೆದಿದ್ದು, ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ.

READ | ಭೀಕರ ಅಪಘಾತ, ಪೊಲೀಸರ 3 ಗಂಟೆಗಳ ಕಾರ್ಯಾಚರಣೆ ಬಳಿಕ ಓಮ್ನಿ ಚಾಲಕ ಸೇಫ್ 

ಎಲ್ಲೆಲ್ಲಿ ಗೋಡೆ ಬರಹಗಳು?
ಹಳೆಯ ಪೆಟ್ರೋಲ್ ಬಂಕ್ ಪಕ್ಕದ ಕಂಬ, ಭೋವಿ ಕಾಲೋನಿಗೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬ, ದೊಡ್ಡಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿಯ ಸಿಮೆಂಟ್ ಬೋರ್ಡ್, ವಿದ್ಯುತ್ ಕಂಬ, ಕೆಲವರ ಮನೆಯ ಗೋಡೆಗಳ ಮೇಲೆ ಸೇರಿದಂತೆ ಹಲವೆಡೆ ‘ಜಾಯಿನ್ ಸಿ.ಎಫ್.ಐ(Join CFI)’ ಎಂದು ಬರೆಯಲಾಗಿದೆ. ನೀಲಿ ಮತ್ತು ಕೆಂಪು ಬಣ್ಣದ ಸ್ಪ್ರೇ ಪೇಂಟ್’ನಿಂದ ಬರೆದಿರುವುದು ಮತ್ತು ಸ್ಟಾರ್ ಚಿತ್ರ ಬಿಡಿಸಿರುವುದು ಕಂಡುಬಂದಿರುತ್ತದೆ.
ಗೋಡೆ ಬರಹಗಳ ಮೇಲೆ ಪೇಂಟ್
ಶಿರಾಳಕೊಪ್ಪ ಪಟ್ಟಣದ ವಿವಿಧೆಡೆ ಗೋಡೆಗಳ ಮೇಲೆ ಬರೆದಿದ್ದ ಬರಹಗಳ ಮೇಲೆ ಪೊಲೀಸರು ಬಣ್ಣ ಬಳಿದಿದ್ದಾರೆ.

https://suddikanaja.com/2022/12/04/dr-dhananjay-sarji-joined-bjp-at-shivamogga/

error: Content is protected !!