
ಸುದ್ದಿ ಕಣಜ.ಕಾಂ | SHIVAMOGGA CITY | 01 OCT 2022
ಶಿವಮೊಗ್ಗ(shivamogga): ಹೊಸಮನೆ(hosamane)ಯಲ್ಲಿ ವಿದ್ಯುತ್ ಕೇಬಲ್(power cable)ಗಳಿಂದ ವಿದ್ಯುತ್ ಪ್ರವಹಿಸಿ ಮನೆಗಳ ಗೋಡೆಗಳಲ್ಲೂ ಕರೆಂಟ್ ಜುಮ್ ಜುಮ್ ಎಂದ ಅನುಭವವಾಗುತ್ತಿದೆ. ಮಹಿಳೆಯೊಬ್ಬರಿಗೆ ಕರೆಂಟ್ ಶಾಕ್ ಕೂಡ ತಗುಲಿದೆ. ಇದನ್ನು ತಿಳಿಯುತ್ತಿದ್ದಂತೆಯೇ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಕೇಬಲ್’ಗಳು ಡ್ಯಾಮೇಜ್, ಜನರಲ್ಲಿ ಭೀತಿ
ಬಡಾವಣೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆದಿದ್ದು, ವಿದ್ಯುತ್ ಕೇಬಲ್ ಗಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಫೀಡರ್ ಫೀಲ್ ಬಾಕ್ಸ್ ಗಳಿಂದ ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ನಿಂದ ಹಲವಾರು ಕೇಬಲ್ ಗಳು ಡ್ಯಾಮೇಜ್ ಆಗಿದ್ದು, ಆದರಿಂದ ವಿದ್ಯುತ್ ಪ್ರವಹಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
READ | ಶಿವಮೊಗ್ಗ ಆರ್.ಟಿ.ಓ ಕಚೇರಿಯಲ್ಲಿ ಸಿಬ್ಬಂದಿ ಚಳಿ ಬಿಡಿಸಿದ ಜಂಟಿ ಸಾರಿಗೆ ಆಯುಕ್ತೆ
ಈ ರೀತಿಯಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ಮಾಡುತ್ತಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ವಿದ್ಯುತ್ ಪ್ರವಹಿಸುತ್ತಿರುವುದರಿಂದ ಜನರು ಭಯ ಭೀತರಾಗಿದ್ದಾರೆ. ಜನರ ಜೀವದ ಜೊತೆ ಚೆಲ್ಲಾಟ ವಾಡಲಾಗುತ್ತಿದೆ ಎಂದು ಕಾಂಗ್ರೆಸ್ ಪ್ರಮುಖ ರಂಗನಾಥ್ ಆರೋಪಿಸಿದ್ದಾರೆ.
ಕಬ್ಬಿಣದ ಗ್ರಿಲ್’ನಲ್ಲಿ ವಿದ್ಯುತ್
ಕೋಟೆಯ ಆಂಜನೇಯ ದೇವಸ್ಥಾನದ ಸಮೀಪ ಅರಮನೆ ಹೋಗುವ ಪ್ರದೇಶ ದ್ವಾರದಲ್ಲಿ ಕಬ್ಬಿಣದ ಗ್ರಿಲ್ ನಲ್ಲಿ ವಿದ್ಯುತ್ ಸ್ಪರ್ಶದ ಅನುಭವವಾಗುತ್ತಿದೆ. ಟೆಸ್ಟರ್ ನಿಂದ ಪರೀಕ್ಷಿಸಿದಾಗ ವಿದ್ಯುತ್ ಪ್ರವಹಿಸುತ್ತಿರುವುದು ಗಮನಕ್ಕೆ ಬಂದಿದೆ.
ವಿಡಿಯೋಗಳು ವೈರಲ್
ಹೊಸಮನೆ ಬಡಾವಣೆಯಲ್ಲಿ ಕೇಬಲ್ ಹಾಳಾಗಿ ವಿದ್ಯುತ್ ಪ್ರವಹಿಸುತ್ತಿರುವ ಮತ್ತು ಗೋಡೆಗಳು ಜುಮ್ ಜುಮ್ ಎನ್ನುವ ಹಾಗೂ ಗ್ರಿಲ್ ನಲ್ಲಿ ವಿದ್ಯುತ್ ಪ್ರವಹಿಸಿದ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಶಿರಾಳಕೊಪ್ಪದಲ್ಲಿ ಅರಳಿದ `ಅಚ್ಚರಿ’ ಪ್ರತಿಭೆ, ಮೈ ಜುಮ್ ಎನಿಸುತ್ತೆ ಈ ಶಾರ್ಟ್ ಮೂವಿ