ಭದ್ರಾವತಿ ನಗರಸಭೆಯಿಂದ 3ಜಿ ಮನೆ, ಎಷ್ಟು ಫಲಾನುಭವಿಗಳಿಗೆ ಸಿಗುತ್ತೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಗಾಂಧಿನಗರದಲ್ಲಿ ಆಯೋಜಿಸಿದ್ದ ಹಳೇನಗರ ಫಲಾನುಭವಿಗಳಿಗೆ ವಸತಿ ಯೋಜನೆ ಸಂಬಂಧ ಬ್ಯಾಂಕ್ ಸಾಲ ಸಹಾಯಧನ ಮತ್ತಿತರ ವಿಷಯಗಳ ಕುರಿತು ಅರಿವುನೀಡುವ ಕಾರ್ಯಕ್ರಮ ನಡೆಯಿತು.

ಪರ್ಯಾಯ ವ್ಯವಸ್ಥೆ ಮಾಡದೇ ವ್ಯಾಪಾರಿಗಳ ಎತ್ತಂಗಡಿಗೆ ನೋಟಿಸ್, ಬೀದಿಗೆ ಬೀಳುವ ಭೀತಿ

ಈ ವೇಳೆ ಮಾತನಾಡಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ನಗರಸಭೆಯು 3ಜಿ ಮನೆಗಳನ್ನು ನಿರ್ಮಿಸುತ್ತಿದೆ. ಇವುಗಳನ್ನು ನಾಲ್ಕು ಸಾವಿರ ಫಲಾನುಭವಿಗಳಿಗೆ ನೀಡುವ ಯೋಜನೆ ಇದೆ. ಇದಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಮನೆ ನಿರ್ಮಾಣಕ್ಕಾಗಿ ಬ್ಯಾಂಕ್‍ಗಳಿಂದ ಸಾಲ ಸಹಾಯಧನ ಪಡೆದು ಸರ್ಕಾರದ ಯೋಜನೆಯ ಪ್ರಯೋಜನ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಿ.ಕೆ.ಮೋಹನ್, ಚೆನ್ನಪ್ಪ ಮಣಿ, ಸಿ.ರಾಮಕೃಷ್ಣೇಗೌಡ, ಬಸವಂತಪ್ಪ, ಲೋಕೇಶ್, ಬಿ.ಕೆ.ಶಿವಕುಮಾರ್, ಬಿ.ಟಿ.ನಾಗರಾಜ್ ಉಪಸ್ಥಿತರಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಾದರೆ ಫಲಾನುಭವಿಗಳು ಮೊದಲು ಖಾತೆ ತೆರೆಯಬೇಕು. ನಂತರ 10 ಸಾವಿರ ರೂ. ಹೂಡಿಕೆ ಮಾಡಬೇಕು.
-ಸಿ.ಪ್ರಭು, ವಿಭಾಗೀಯ ಮ್ಯಾನೇಜರ್, ಯೂನಿಯನ್ ಬ್ಯಾಂಕ್

error: Content is protected !!