ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೋಮವಾರ ಹೊಸದಾಗಿ 10 ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. 18 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 348 ಜನರನ್ನು ಕೊರೊನಾ ಬಲಿ ಪಡೆದಿದೆ.
ಗಂಟಲು ದ್ರವದ ಮಾದರಿ ಪರೀಕ್ಷೆ ನಿರಂತರವಾಗಿ ನಡೆಯುತ್ತಿದ್ದು, ಸೋಮವಾರದಂದು 2555 ಮಾದರಿ ಸಂಗ್ರಹ ಮಾಡಿದ್ದು, 1353 ನೆಗೆಟಿವ್ ಬಂದಿವೆ. 108 ಸಕ್ರಿಯ ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿವೆ.
ತಾಲೂಕುವಾರು ವರದಿ: ಶಿವಮೊಗ್ಗ 3, ಭದ್ರಾವತಿ 2, ಶಿಕಾರಿಪುರ 2, ತೀರ್ಥಹಳ್ಳಿ 0, ಸೊರಬ 2 ಸಾಗರ 0, ಹೊಸನಗರ 2, ಬೇರೆಯ ಜಿಲ್ಲೆಯ 1 ಪ್ರಕರಣಗಳು ಕಂಡುಬಂದಿದೆ.