ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಸೇವೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಗೃಹರಕ್ಷಕ ಸದಸ್ಯರನ್ನಾಗಿ ನೋಂದಾಯಿಸುವ ಸಂಬಂಧ ಡಿಸೆಂಬರ್ 17ರಂದು ಆಯ್ಕೆ ಸಮಿತಿಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
READ | ಅಬಕಾರಿ ಇಲಾಖೆಯಲ್ಲಿ ಶೀಘ್ರವೇ ನೇಮಕಾತಿ
ಎಲ್ಲಿ ನಡೆಯಲಿದೆ ಸಂದರ್ಶನ?
ಆಯ್ಕೆ ಸಂದರ್ಶನವು ಡಿ.17 ರ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆವರೆಗೆ ನಗರದ ಸಾಗರ ರಸ್ತೆಯ ಡಿ.ಎ.ಆರ್ ಕವಾಯತು ಮೈದಾನದಲ್ಲಿ ನಡೆಯಲಿದೆ. ಆಯ್ಕೆ ಸಮಿತಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಡಿಡಿಪಿಐ ಮತ್ತು ಜಿಲ್ಲಾ ಸಮಾದೇಷ್ಟರು ಇರುವರು. ಆ ದಿನ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ ದೂ.ಸಂ; 08182-295630 ನ್ನು ಸಂಪರ್ಕಿಸಬಹುದೆಂದು ಗೃಹರಕ್ಷಕ ದಳ ಕಚೇರಿ ಜಿಲ್ಲಾ ಸಮಾದೇಷ್ಟರು ತಿಳಿಸಿದ್ದಾರೆ.
https://suddikanaja.com/2022/12/04/ox-attack-on-a-man-at-shivamogga-video-gone-viral/