Arecanut | ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ

arecanut

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಡಿಕೆ ಬೆಳೆಗಾರರ ಸಮಸ್ಯೆಗಳು ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬಿ.ವೈ.ರಾಘವೇಂದ್ರ ಅವರು ಸಂಸತ್ ಅಧಿವೇಶನದಲ್ಲಿ ಈ ಎರಡು ಸಮಸ್ಯೆಗಳ ಬಗ್ಗೆ ಧ್ವನಿ‌ ಎತ್ತಿದ್ದಾರೆ‌. ಫಲಪ್ರದವಾಗುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ, ಸಂತ್ರಸ್ತರು ಮತ್ತು ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

READ | ಎನ್‍ಪಿಎಸ್ ವಿರುದ್ಧ ಹೋರಾಟಕ್ಕೆ ದಿನಾಂಕ ನಿಗದಿ, ಸಿ.ಎಸ್.ಷಡಾಕ್ಷರಿ ಹೇಳಿದ್ದೇನು?

ರಾಜ್ಯ, ಕೇಂದ್ರದ ಮೇಲೆ ಒತ್ತಡ
ಶರಾವತಿ ಸಂತ್ರಸ್ತರ ಸಮಸ್ಯೆಗೆ ಸಂಬಂಧಿಸಿದಂತೆ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಗೃಹಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಹರತಾಳು ಹಾಲಪ್ಪ, ಅಶೋಕ್ ನಾಯ್ಕ ಮುಂತಾದವರು ಕೇಂದ್ರದ ಗಮನ ಸೆಳೆದಿದ್ದರು. ರಾಜ್ಯದಲ್ಲಿಯೂ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ನಡೆದಿತ್ತು. ಮುಖ್ಯಮಂತ್ರಿಗಳು ಕೂಡ ಭರವಸೆ ನೀಡಿದ್ದರು. ಹೀಗೆ ಒಟ್ಟಾರೆ ಎಲ್ಲರ ಶ್ರಮದಿಂದ ಮಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ‌ ಎಂದು ತಿಳಿಸಿದರು.
ಅಡಿಕೆಗೆ ದ್ರೋಣ್ ಮೂಲಕ ಔಷಧಿ
ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ರೈತರಿಗೆ ಉಚಿತವಾಗಿ ಔಷಧಿ ನೀಡಿದೆ. ದ್ರೋಣ್ ಮೂಲಕ ಔಷಧಿ ಸಿಂಪಡಿಸಲು ಕ್ರಮ ಕೈಗೊಂಡಿದೆ.
ಅಸ್ಮಿತೆಗಾಗಿ ಕಾಪಾಡಿಕೊಳ್ಳಲು ಆರೋಪ
ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳಲು ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅಮಿತ್ ಶಾ ಅವರ ವಿರುದ್ಧ ಆರೋಪಿಸುತ್ತಿದ್ದಾರೆ. ಅಡಿಕೆಯ ಬಗ್ಗೆ ಏನೂ ಗೊತ್ತಿಲ್ಲದ ಇವರು ಅಡಿಕೆಗೆ ಬೆಲೆಯೇ ಇಲ್ಲ ಎನ್ನುತ್ತಾರೆ. ಆದರೆ ಅಡಿಕೆಗೆ ಈಗಲೂ 41ರಿಂದ 43 ಸಾವಿರ ಬೆಲೆ ಇದೆ ಎಂದರು.
ಬೂತ್ ವಿಜಯ ಕಾರ್ಯಕ್ರಮ
ಸಂಘಟನೆಯ ಹಿನ್ನೆಲೆಯಲ್ಲಿ ಜನವರಿ 2ರಿಂದ 12ರ ವರೆಗೆ ‘ಬೂತ್ ವಿಜಯ’ ಎಂಬ ಕಾರ್ಯಕ್ರಮವನ್ನು, ಜ.21ರಿಂದ 29ರ ವರೆಗೆ ಮನೆಮನೆ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಪ್ರಮುಖರಾದ ಬಿ.ಕೆ. ಶ್ರೀನಾಥ್, ಬಿ.ಆರ್.ಮಧುಸೂದನ್, ನವೀನ್ ಹೆಬ್ಬಾರ್, ಜ್ಞಾನೇಶ್ವರ್, ಹೃಷಿಕೇಶ್ ಪೈ, ರತ್ನಾಕರ ಶೆಣೈ, ವಿನ್ಸೆಂಟ್ ರೋಡ್ರಿಗಸ್, ಶಿವರಾಜ್, ಅಣ್ಣಪ್ಪ ಇದ್ದರು.

https://suddikanaja.com/2022/12/24/shivamogga-police-operation-against-defective-silencer-and-shrill-horns-crash-under-bulldozer/

error: Content is protected !!