
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್’ನಲ್ಲಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಉದ್ಯಮಿಯೊಬ್ಬರನ್ನು ಹೊಗಳಿದ್ದಾರೆ. ಅವರ ಕೆಲಸಗಳನ್ನು ಮನಗಂಡು ಶ್ಲಾಘಿಸಿದ್ದಾರೆ.
ನಗರದ ಸುರೇಶ್ ಮತ್ತು ಮೈಥಲಿ ದಂಪತಿಯ ಕಾರ್ಯವನ್ನು ತಮ್ಮ ಮಾತುಗಳಲ್ಲಿ ಸ್ಮರಿಸಿರುವ ಮೋದಿ ಅವರು, ಈ ದಂಪತಿ ಅಡಿಕೆ ಹಾಳೆಯಿಂದ ಪಾದರಕ್ಷೆ, ಹ್ಯಾಂಡ್ ಬ್ಯಾಗ್, ಡೈರಿಗಳ ಮುಖಪುಟ, ಅಲಂಕಾರಿಕ ನೆಲಹಾಸು ಮತ್ತಿತರ ವಸ್ತುಗಳನ್ನು ತಯಾರಿಸುತ್ತಿದ್ದು, ಈ ಮೂಲಕ ಆರ್ಥೀಕವಾಗಿ ಸದೃಢರೂ ಆಗಿದ್ದಾರೆ.
READ | ಎನ್ಪಿಎಸ್ ವಿರುದ್ಧ ಹೋರಾಟಕ್ಕೆ ದಿನಾಂಕ ನಿಗದಿ, ಸಿ.ಎಸ್.ಷಡಾಕ್ಷರಿ ಹೇಳಿದ್ದೇನು?
ಹೊರದೇಶಗಳಿಗೂ ರಫ್ತು
ಅಡಿಕೆ ಹಾಳೆಯಿಂದ ತಟ್ಟೆಗಳನ್ನು ತಯಾರಿಸುವುದು ಹೊಸತೇನಲ್ಲ. ಆದರೆ, ಅದೇ ಹಾಳೆಯಿಂದ ಪಾದರಕ್ಷೆ ಸೇರಿದಂತೆ ಇನ್ನಿತರ ವಸ್ತುಗಳನ್ನು ತಯಾರಿಸುವ ಮೂಲಕ ಸುರೇಶ್ ಅವರು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾರತ ಮಾತ್ರವಲ್ಲದೇ ಲಂಡನ್, ಯುರೋಪ್ ದೇಶಗಳಿಗೂ ಈ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದಾರೆ ಎಂಬುವುದನ್ನು ಮೋದಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಮೋದಿ ನೀಡಿದ ಕರೆ ಏನು?
ಅಡಿಕೆ ಹಾಳೆಗಳಿಂದ ವಸ್ತುಗಳನ್ನು ತಯಾರಿಸಿ ಬೇರೆಯ ರಾಷ್ಟ್ರಗಳಿಗೆ ವಸ್ತುಗಳನ್ನು ರಫ್ತು ಮಾಡುತ್ತಿರುವುದು `ಓಕಲ್ ಫಾರ್ ಲೋಕಲ್’ ಪರಿಕಲ್ಪನೆಗೆ ಪೂರಕವಾಗಿದೆ.
ಭಾರತದ ಪಾರಂಪರಿಕ ಜ್ಞಾನವನ್ನು ಈ ರೀತಿಯಲ್ಲಿ ಉಳಿಸಿಕೊಳ್ಳಬೇಕಾಗಿದೆ. ಈ ಬಗ್ಗೆ ಹೆಚ್ಚೆಚ್ಚು ಜಾಗೃತರಾಗಬೇಕು. ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು. ಇದು ಸ್ಥಳೀಯವಾಗಿ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
Women’s Cricket | ಶಿವಮೊಗ್ಗದಲ್ಲಿ ಮಹಿಳಾ ಕ್ರಿಕೆಟ್ ಹವಾ, ಹೇಗಿರಲಿದೆ ಪಂದ್ಯಾವಳಿ? ಯಾವೆಲ್ಲ ತಂಡಗಳು ಭಾಗಿ?