Shivamogga airport | ಶಿವಮೊಗ್ಗ ವಿಮಾನ ನಿಲ್ದಾಣ ನಾಮಕರಣ ವಿಚಾರ ಮತ್ತೆ ಮುನ್ನೆಲೆಗೆ, ಯಾರ ಹೆಸರಿಡುವಂತೆ ಒತ್ತಾಯ?

Shivamogga airport

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ವರ್ಷವಂತೂ ಈ ವಿಚಾರವಾಗಿ ಹಲವು ಪ್ರತಿಭಟನೆಗಳೇ ನಡೆದಿದ್ದವು. ತದನಂತರ, ಈ ಬಗ್ಗೆ ಹೆಚ್ಚೇನೂ ಚರ್ಚೆಗಳು ನಡೆದಿಲ್ಲ. ಈಗ ಮತ್ತೆ ಈಡಿಗ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

READ | ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಯದುವೀರ್ ಒಡೆಯರ್

ಈಡಿಗರ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್ ಬಂಗರಪ್ಪ ಅವರ ಹೆಸರಿಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಯುವಲ್ಲಿ ಎಸ್. ಬಂಗಾರಪ್ಪ ಅವರ ಪಾತ್ರ ಅಪಾರವಾಗಿದೆ. ಅವರು ಕೇವಲ ವ್ಯಕ್ತಿಯಾಗಿರದೆ ನೊಂದವರ ಕಣ್ಣೀರು ಒರೆಸುವ ಶಕ್ತಿಯಾಗಿ ಹಾಗೂ ಶೋಷಿತರ ಪರ ಧ್ವನಿಯಾಗಿ ನಿಂತಿದ್ದರು. ಅವರು ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಹೀಗಾಗಿ,  ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟು ಗೌರವಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

https://suddikanaja.com/2022/12/31/from-now-on-city-bus-will-not-stop-everywhere-notification-for-117-bus-stops-in-shimoga-city/

error: Content is protected !!