Power cut | ಜನವರಿ‌ 12, 13ರಂದು ಶಿವಮೊಗ್ಗದ ಬಹುಭಾಗಗಳಲ್ಲಿ ಕರೆಂಟ್ ಇರಲ್ಲ

IMG 20220521 162055 149

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲ್ಲೂಕಿನ ಮಂಡ್ಲಿ ವಿದ್ಯುತ್ ವಿತರಣೆ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಕೈಗೊಂಡಿರುವುದರಿಂದ ಕೆಳಕಂಡ ಗ್ರಾಮಗಳಲ್ಲಿ ಜ.12 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ‌‌ ವಿದ್ಯುತ್ ವ್ಯತ್ಯಯ?
ಇಲಿಯಾಜ್‍ ನಗರ 4 ರಿಂದ 13ನೇ ಕ್ರಾಸ್, ಫಾರೂಕ್ಯ ಶಾದಿಮಹಲ್, ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರ, ಭವಾನಿ ಲೇಔಟ್, ಜಿ.ಎಸ್.ಕ್ಯಾಸ್ಟಿಂಗ್, ಲಾರಿ ಗ್ಯಾರೇಜ್, ಕೆಳಗಿನ ತುಂಗಾನಗರ, ಮಂಡಕ್ಕಿಭಟ್ಟಿ, ಟಿಪ್ಪುನಗರ, ಮಂಜುನಾಥ ಬಡಾವಣೆ, ದುರ್ಗಿಗುಡಿ ಮಾರ್ಗ, ಖಾಜಿನಗರ 80 ಅಡಿರಸ್ತೆ, ಕಾಮತ್ ಲೇಔಟ್, ಮಲ್ಲಿಕಾರ್ಜುನ ಬಡಾವಣೆ, ಮುಳಘಟ್ಟ, ಆನಂದರಾವ್ ಬಡಾವಣೆ, ಆರ್.ಎಂ.ಎಲ್.ನಗರ 1ನೇ ಮತ್ತು 2ನೇ ಹಂತ, ಬುದ್ಧನಗರ, ಕೆ.ಎಸ್.ಆರ್.ಟಿ.ಸಿ. ಡಿಪೋ, ಮಾರ್ನಮಿಬೈಲು, ಖಾಸಗಿ ಬಸ್‍ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶ, ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ ಕಲ್ಲೂರು ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್, ಹನುಮಂತಾಪುರ, ಶರಾವತಿನಗರ, ಶಾರದ ಕಾಲೋನಿ ಹಾಗೂ ಸುತ್ತಮುತ್ತಲಿನ ಐ.ಪಿ.ಲಿಮಿಟ್‍ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

READ | ಸರ್ಜಿ ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞ ಡಾ.ಸತೀಶ್ ಇನ್ನಿಲ್ಲ

13ರಂದು ವಿದ್ಯುತ್ ವ್ಯತ್ಯಯ
ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-8, 9, 10 ಮತ್ತು 11 ರಲ್ಲಿ ಜ.13 ರಂದು ಸ್ಮಾರ್ಟ್‌ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಆಲ್ಕೊಳ, ಕಾಶೀಪುರ, ಐಜಿ ವೃತ್ತ, ಜಯದೇವ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಕಲ್ಲಹಳ್ಳಿ ಎ, ಬಿ, ಸಿ, ಡಿ, ಇ, ಎಫ್, ಜಿ.ಎಚ್ ಬ್ಲಾಕ್, ಕರಿಯಣ್ಣ ಬಿಲ್ಡಿಂಗ್, ಕೆಂಚಪ್ಪ ಲೇಔಟ್, ಕಾಶೀಪುರ ರೈಲ್ವೆ ಟ್ರ್ಯಾಕ್ ಹತ್ತಿರ, ಬಾಲ ಮಂದಿರ, ಇಂದಿರಾಗಾಂಧಿ ಬಡಾವಣೆ, ವಿನೋಬನಗರ 100 ಅಡಿ ರಸ್ತೆ, ಆಲ್ಕೋಳದಿಂದ ಪೊಲೀಸ್ ಚೌಕಿವರೆಗೆ, ವಿನೋಬನಗರ 1, 2, 3 ನೇ ಹಂತ, ಮೇದಾರಕೇರಿ, ಶುಭಮಂಗಳ, ಪೊಲೀಸ್ ಚೌಕಿ, ಸೂರ್ಯ ಲೇಔಟ್, ದೇವರಾಜ ಅರಸ್ ಬಡಾವಣೆ, ಕನಕ ನಗರ, ಪಿ&ಟಿ ಕಾಲೋನಿ, ಲಕ್ಷ್ಮೀ ಟಾಕೀಸ್ ಮುಂಭಾಗ, ಆರ್.ಎಂ.ಸಿ, ಅರವಿಂದ ನಗರ, ಜೈಲ್ ಕಾಂಪೌಂಡ್, ಹುಚ್ಚರಾಯ ಕಾಲೋನಿ, ವೀರಣ್ಣ ಲೇಔಟ್, ಚೇತನಾ ಪಾರ್ಕ್ ಹತ್ತಿರ, ಶಿವಾಲಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

https://suddikanaja.com/2022/12/25/pm-narendra-modi-talk-on-shivamoggas-entrepreneur-in-mann-ki-baat/

error: Content is protected !!