B.Ed Document verification | ಬಿ.ಎಡ್ ಕೋರ್ಸಿನ ಮೂಲ ದಾಖಲೆಗಳ ಪರಿಶೀಲನೆ ಆರಂಭ, ಎಲ್ಲಿಯವರೆಗೆ ಕಾಲಾವಕಾಶ?

Public Notice

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2022-23 ನೇ ಸಾಲಿನ ಬಿ.ಎಡ್ ಕೋರ್ಸಿನ ದಾಖಲಾತಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನಾ ಕಾರ್ಯ ಪ್ರಾರಂಭವಾಗಿದೆ.
ಈಗಾಗಲೇ ಬಿ.ಎಡ್ ಕೋರ್ಸಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ನೋಡಲ್ ಕೇಂದ್ರ ಸಂಖ್ಯೆ ಎನ್-06, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಿವಮೊಗ್ಗ ಇಲ್ಲಿಗೆ ಹಾಜರಾಗಿ ಮೂಲ ದಾಖಲೆಗಳನ್ನು ಪರಿಶೀಲಿಸಿಕೊಂಡು ದಾಖಲಾತಿ ಪಡೆಯಲು ತಿಳಿಸಿದೆ.
ದಾಖಲಾತಿ ಪ್ರಕ್ರಿಯೆಯು ಜನವರಿ 7ರಿಂದ ಆರಂಭವಾಗಿದ್ದು ಫೆಬ್ರವರಿ 9ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಇಲಾಖೆ ವೆಬ್‍ಸೈಟ್ www.schooleducation.kar.nic.in ಸಂಪರ್ಕಿಸಬಹುದೆಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು(ಅಭಿವೃದ್ದಿ) ತಿಳಿಸಿದ್ದಾರೆ.

error: Content is protected !!