ADC Transfer | ಶಿವಮೊಗ್ಗ ಎಡಿಸಿ ನಾಗೇಂದ್ರ ಹೊನ್ನಳ್ಳಿ ವರ್ಗಾವಣೆ, ಹೊಸ ಅಪರ ಜಿಲ್ಲಾಧಿಕಾರಿ ಯಾರು?

DC Office

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಪರ ಜಿಲ್ಲಾಧಿಕಾರಿ (ಎಡಿಸಿ) ಡಾ.ನಾಗೇಂದ್ರ ಹೊನ್ನಳ್ಳಿ (Dr. Nagendra honnalli) ಅವರನ್ನು ಬೆಂಗಳೂರಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗೆ ವರ್ಗಾವಣೆ ಮಾಡಿ ಶನಿವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ನೂತನ ಎಡಿಸಿಯಾಗಿ ಸ್ಥಳ‌ ನಿರೀಕ್ಷಣೆಯಲ್ಲಿದ್ದ ಸಿದ್ರಾಮಪ್ಪ ಶ್ರೀಶೈಲ್ ಬಿರಾದಾರ್ ಅವರನ್ನು ನಿಯೋಜನೆ ಮಾಡಲಾಗಿದೆ.

READ | ಶಿವಮೊಗ್ಗ ಎಡಿಸಿ ಅನುರಾಧ ವರ್ಗಾವಣೆ, ತೆರವಾದ ಸ್ಥಾನಕ್ಕೆ  ಯಾರು ಬರಲಿದ್ದಾರೆ?

2021 ಜುಲೈನಲ್ಲಿ ಜಿ.ಅನುರಾಧ ಅವರನ್ನು ವರ್ಗಾವಣೆ ಮಾಡಿದ ಬಳಿಕ ಆ ಸ್ಥಾನಕ್ಕೆ ಡಾ.ನಾಗೇಂದ್ರ ಅವರನ್ನು ನಿಯೋಜಿಸಲಾಗಿತ್ತು. ಎಡಿಸಿ ಹುದ್ದೆಗೂ ಮುಂಚೆ ನಾಗೇಂದ್ರ ಹೊನ್ನಳ್ಳಿ ಅವರು ಶಿವಮೊಗ್ಗದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ.

ADC transfer

error: Content is protected !!