Balebare ghat | ಬಾಳೆಬರೆ ಘಾಟ್ ನಲ್ಲಿ 2 ತಿಂಗಳು ಸಂಚಾರ ಬಂದ್, ಪರ್ಯಾಯ ಮಾರ್ಗಕ್ಕೆ ವ್ಯವಸ್ಥೆ, ಯಾವಾಗಿಂದ ಅನ್ವಯ?

Balebare ghat

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ (State Highway) -52 ರ ಬಾಳೆಬರೆ ಘಾಟ್‍(Balebare Ghat)ನ ಎರಡು ಭಾಗಗಳಲ್ಲಿ ಕಾಂಕ್ರಿಟ್ ಪೇವ್‍ಮೆಂಟ್ ನಿರ್ಮಿಸಬೇಕಿರುವುದರಿಂದ ಫೆಬ್ರವರಿ 5ರಿಂದ ಏಪ್ರಿಲ್‌ 5 ರವರೆಗೆ ಈ ಕೆಳಕಂಡಂತೆ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R Selvamani) ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ.

READ | ಸಾಗರ ಮಾರಿಕಾಂಬ ಜಾತ್ರಾ ಮಹೋತ್ಸವ ಹಿನ್ನೆಲೆ ವಾಹನ ನಿಲುಗಡೆ ನಿಷೇಧ, ಯಾವ್ಯಾವ ಮಾರ್ಗಗಳಲ್ಲಿ ನಿಯಮ ಅನ್ವಯ?

ಪರ್ಯಾಯ ಮಾರ್ಗದ ಮಾಹಿತಿ

  • ರಾಜ್ಯ ಹೆದ್ದಾರಿ-52 ತೀರ್ಥಹಳ್ಳಿ (Thirthahalli) ಮೂಲಕ ಕುಂದಾಪುರ (Kundapura) ಕಡೆ ಹೋಗುವ ಲಘು ವಾಹನಗಳು | ತೀರ್ಥಹಳ್ಳಿ- ಹಾಲಾಡಿ(Haladi)- ಬಸ್ರೂರು- ಕುಂದಾಪುರ ರಸ್ತೆ ಮೂಲಕ ಹಾಗೂ ತೀರ್ಥಹಳ್ಳಿ- ಹೆಬ್ರಿ- ಉಡುಪಿ- ಕುಂದಾಪುರ ರಸ್ತೆ ಮೂಲಕ ಸಂಚರಿಸಬಹುದು.
  • ರಾಜ್ಯ ಹೆದ್ದಾರಿ-52 ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಭಾರಿ ವಾಹನಗಳು |ತೀರ್ಥಹಳ್ಳಿ- ಕಾನುಗೋಡು- ನಗರ- ಕೊಲ್ಲೂರು ಕುಂದಾಪುರ ಮೂಲಕ ಹಾಗೂ ಶಿವಮೊಗ್ಗ/ ಸಾಗರ (Sagar) ಕಡೆಯಿಂದ ಹೊಸನಗರ (Hosanagar) ಮೂಲಕ ಕುಂದಾಪುರ ಕಡೆ ಹೋಗುವ ಲಘು/ ಭಾರಿ ವಾಹನಗಳು ಹೊಸನಗರ- ನಗರ- ಕೊಲ್ಲೂರು ರಸ್ತೆ ಮೂಲಕ ಸಂಚರಿಸಬೇಕೆಂದು ಆದೇಶಿಸಿದ್ದಾರೆ.

error: Content is protected !!