Arecanut Import| ಅಡಿಕೆ ಕನಿಷ್ಠ ಆಮದು ದರ ಹೆಚ್ಚಳದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ

Shobha Karandlaje areca

 

 

ಸುದ್ದಿ ಕಣಜ.ಕಾಂ ಪುತ್ತೂರು
PUTTUR: ಅಡಿಕೆ (arecanut) ಆಮದು ದರ(arecanut import)ವನ್ನು 351 ರೂ.ಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವ ಶೋಭಾ ಕರಂದ್ಲಾಜೆ (shobha karandlaje) ತಿಳಿಸಿದರು.
ಕ್ಯಾಂಪ್ಕೊ ಸುವರ್ಣ ಮಹೋತ್ಸವ ಪ್ರಯುಕ್ತ ಪುತ್ತೂರಿನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಐದನೇ ಮೆಗಾ ಕೃಷಿ ಯಂತ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

READ | ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಎಷ್ಟಿದೆ?

ಅಡಿಕೆಗೆ 250 ರೂ. ಆಮದು ಬೆಲೆ ನಿಗದಿಪಡಿಸಿ ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಆದೇಶಿಸಿತ್ತು. ಅದಕ್ಕೆ ಇನ್ನೂ 100 ರೂ. ಏರಿಕೆ ಮಾಡಬೇಕು ಎಂದು ಕ್ಯಾಂಪ್ಕೋ ಬೇಡಿಕೆ ಸಲ್ಲಿಸಿದ್ದು, ಅದಕ್ಕೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.

ಇಂಡೋನೇಷ್ಯಾ, ಮ್ಯಾನ್ಮಾರ್, ಶ್ರೀಲಂಕಾ, ನೇಪಾಳದಿಂದ ಅಡಿಮೆ ಆಮದು ಸಂಪೂರ್ಣ ನಿಷೇಧಿಸಬೇಕು.
ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷ, ಕ್ಯಾಂಪ್ಕೊ

ಮಲೆನಾಡು ಸೇರಿದಂತೆ ಅಡಿಕೆ ಬೆಳೆಯುವ ಪ್ರದೇಶರಿಗೆ ಕಾಡುತ್ತಿರುವ ಅಡಿಕೆ ಹಳದಿ ರೋಗ, ಎಲೆಚುಕ್ಕೆ ರೋಗದ ಬಗ್ಗೆ ಅಧ್ಯಯನ ಮಾಡುವುದಕ್ಕೆ ಕೆನಡಾದ ವಿಜ್ಞಾನಿಗಳ ತಂಡವನ್ನು ರಚನೆ ಮಾಡಲಾಗಿದೆ. ಈಗಾಗಲೇ ಅಡಿಕೆಯ ಮಾದರಿಗಳನ್ನು ಸಹ ಅಲ್ಲಿಗೆ ಕಳುಹಿಸಲಾಗಿದೆ ಎಂದು ಶೋಭಾ ತಿಳಿಸಿದರು.
ಸಶಕ್ತ ವಕೀಲರ ತಂಡ ರಚಿಸಲು ಕೇಂದ್ರದ ತೀರ್ಮಾನ
ಅಡಿಕೆ ಕ್ಯಾನ್ಸರ್’ಕಾರಕ ಎಂಬ ಇಂದಿರಾ ಜೈಸಿಂಗ್ ಅವರ ವರದಿಯ ಆಧಾರದ ಮೇಲೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಸಮರ್ಥವಾಗಿ ವಕಾಲತ್ತು ಮಾಡಲು ಮತ್ತು ಅಡಿಕೆ ಕ್ಯಾನ್ಸರ್’ಕಾರಕ ಅಲ್ಲ ಎಂಬುವುದನ್ನು ಸಾಬೀತುಪಡಿಸುವುದಕ್ಕೆ ಸಶಕ್ತ ವಕೀಲರ ತಂಡವನ್ನು ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಯಾಂಪ್ಕೊ ಪ್ರಮುಖರು, ಅಡಿಕೆ ಬೆಳೆಗಾರರು ಉಪಸ್ಥಿತರಿದ್ದರು.

Bike Rally | ಬೈಕ್‍ನಲ್ಲೇ ದೇಶ ಪರ್ಯಟನೆಗೆ ಹೊರಟ ಮಲೆನಾಡು ಹುಡುಗ, ಬೈಕಿನ ವಿಶೇಷಗಳೇನು?

error: Content is protected !!